ಯೋಗ ಭಾರತದಲ್ಲಿ ಹುಟ್ಟಿದ ಆಧ್ಯಾತ್ಮಿಕ ಅಭ್ಯಾಸ

22-kollegal-4,,,
ಕೊಳ್ಳೇಗಾಲ ಪಟ್ಟಣದ ವಕೀಲರ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಯೋಗ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮಕ್ಕೆ ಪ್ರಧಾನ ಸಿವಿಲ್ ನ್ಯಾಯಾಧೀಶೆ ಎಂ.ಎನ್. ನಂದಿನಿ ಚಾಲನೆ ನೀಡಿದರು. ರವಿ, ನಿರ್ಮಲಾ, ಮಾದಪ್ಪ, ಸವಿತಾ ಇದ್ದರು.
Published on

ಕೊಳ್ಳೇಗಾಲ: ಯೋಗವು ಭಾರತದಲ್ಲಿ ಹುಟ್ಟಿಕೊಂಡ ಪ್ರಾಚೀನ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ಎಂ.ಎನ್.ನಂದಿನಿ ಹೇಳಿದರು.

ಪಟ್ಟಣದ ವಕೀಲರ ಸಭಾಂಗಣದಲ್ಲಿ ಶನಿವಾರ ನ್ಯಾಯಾಂಗ ಇಲಾಖೆ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಯೋಗ ಎಂಬ ಪದವು ಸಂಸ್ಕೃತದಿಂದ ಬಂದಿದೆ. ಇದು ದೇಹ ಮತ್ತು ಪ್ರಜ್ಞೆಯ ಒಕ್ಕೂಟವನ್ನು ಸಂಕೇತಿಸುವುದಾಗಿದೆ. ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ ಎಂಬ ವಿಷಯದೊಂದಿಗೆ ಯೋಗದ 10ನೇ ಅಂತಾರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತಿದೆ. ಯೋಗ ಪರಿವರ್ತಕ ಅಭ್ಯಾಸ, ಮನಸ್ಸು ಮತ್ತು ದೇಹದ ಸಾಮರಸ್ಯ, ಆಲೋಚನೆ ಮತ್ತು ಕ್ರಿಯೆಯ ನಡುವಿನ ಸಮತೋಲನ ಮತ್ತು ಸಂಯಮವನ್ನು ಪ್ರತಿನಿಧಿಸುತ್ತದೆ. ಇದು ದೇಹ, ಮನಸ್ಸು, ಆತ್ಮವನ್ನು ಸಂಯೋಜಿಸುತ್ತದೆ, ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಮಗ್ರ ವಿಧಾನವನ್ನು ನೀಡುತ್ತದೆ. ಅದು ನಮ್ಮ ಒತ್ತಡದ ಜೀವನಕ್ಕೆ ಶಾಂತಿ ತರುತ್ತದೆ ಎಂದು ತಿಳಿಸಿದರು.

ಯೋಗ ಶಿಕ್ಷಕಿ ಸವಿತಾ ಅವರು ವಿವಿಧ ಯೋಗದ ವಿವಿಧ ಆಸನಗಳ ಬಗ್ಗೆ ಮಾಹಿತಿ ನೀಡಿದರು. ವಕೀಲರ ಸಂಘದ ಅಧ್ಯಕ್ಷ ರವಿ, ಉಪಾಧ್ಯಕ್ಷೆ ನಿರ್ಮಲಾ, ವಕೀಲರಾದ ಮಾದಪ್ಪ, ರವಿಕುಮಾರ್, ರಾಧಾಕೃಷ್ಣ, ರಾಜೇಂದ್ರ ಹಾಗೂ ನ್ಯಾಯಾಲಯದ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net