

ಹುಬ್ಬಳ್ಳಿ: ಇಲ್ಲಿಯ ಲಿಂಗರಾಜ ನಗರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಯೋಗ ದಿನಾಚರಣೆ ಅಂಗವಾಗಿ ಶುಕ್ರವಾರ ಶ್ರೀಕಟ್ಟಿ ಮಂಗಳಾದೇವಿ ಯೋಗ ಕೇಂದ್ರದ ವತಿಯಿಂದ ಯೋಗಾಭ್ಯಾಸ ಶಿಬಿರ ಏರ್ಪಡಿಸಲಾಗಿತ್ತು.
ಚೇತನ ಬಿಜಿನೆಸ್ ಸ್ಕೂಲ್ ನಿರ್ದೇಶಕ ಡಾ. ವಿಶ್ವನಾಥ ಕೊರವಿ ಶಿಬಿರ ಉದ್ಘಾಟಿಸಿ ಮಾತನಾಡಿ, ಯೋಗ ನಮ್ಮ ಜೀವನದ ಮುಖ್ಯ ಭಾಗವಾಗಿದೆ, ಪ್ರತಿಯೊಬ್ಬರೂ ನಿತ್ಯ ಯೋಗ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.
ಉದ್ಯಮಿ ಶಿವಾನಂದ ಕೊಟ್ಟೂರಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ನೂರಕ್ಕೂ ಹೆಚ್ಚು ಯೋಗ ಪಟುಗಳು ಯೋಗಾಭ್ಯಾಸ ಮಾಡಿದರು.
ನಂದಿನಿ ಕಶ್ಯಪ್ ಮಜೇಥಿಯಾ, ಶಿವಶಂಕರ ಹಿರೇಮಠ, ಗಿರೀಜಾ ಸಂಗೊಳ್ಳಿ, ಶೋಭಾ ಪೊಲೀಸ್ ಪಾಟೀಲ, ಸುಚಿತ ಅಂಗಡಿ ಇತರರನ್ನು ಸನ್ಮಾನಿಸಲಾಯಿತು.
ಯೋಗ ಶಿಕ್ಷಕಿ ಸುಜಾತಾ ನವಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದು ಕಪಲಿ ಪರಿಚಯ ಮಾಡಿದರು. ಡಾ. ಲಿಂಗರಾಜ ಅಂಗಡಿ ವಂದಿಸಿದರು.