ಜೀತೊದಿಂದ ಯೋಗ ದಿನ

IMG_20240621_202913_548.jpg
Published on

ಹುಬ್ಬಳ್ಳಿ: ಇಲ್ಲಿಯ ಜೀತೊ ಶಾಖೆ ವತಿಯಿಂದ ಸ್ಪೋರ್ಟ್ಸ್ ಪಾರ್ಕ್ ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಮುನ್ನಾದಿನ "ಗುಡ್ ಮಾರ್ನಿಂಗ್ ಶೋ' ಯೋಗ ಅಧಿವೇಶನ ಆಯೋಜಿಸಲಾಯಿತು.

ಯೋಗ ತರಬೇತುದಾರರಾದ ತೃಪ್ತಿ ಬನ್ಸಾಲಿ, ಯೋಗ ಮತ್ತು ಧ್ಯಾನದ ಮಹತ್ವ ಕುರಿತು ಸದಸ್ಯರಿಗೆ ವಿವರಿಸಿದರು.

ಜೀತೊ ಅಧ್ಯಕ್ಷ ಅನಿಲಕುಮಾರ ಜೈನ್, ಉಪಾಧ್ಯಕ್ಷ ಭರತ್ ಪಟ್ವಾರಿ, ಮಹಿಳಾ ಅಧ್ಯಕ್ಷೆ ಗೀತಾ ಛೇಡಾ, ಮುಖ್ಯ ಕಾರ್ಯದರ್ಶಿ ಪ್ರವಿಣ ಚೌಧರಿ, ಶೀತಲ್ ಶಾ, ಪುರಂ ನಹತಾ, ಅಶೋಕ ಶಾ, ಅಕ್ಷಯ ಬಗ್ರೇಚಾ, ಅಂಕಿತ್ ಜೈನ್, ಸೋಹನ್ ಜೈನ್, ರಾಜನ್ ಜೈನ್, ಆಶಿಶ್ ನಹತಾ, ಧರ್ಮೇಂದ್ರ ಜೈನ್, ಹಲವಾರು ಗಣ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net