

ಧಾರವಾಡ: ವಿಶ್ವದ ಮನುಕುಲದ ಆರೋಗ್ಯಕ್ಕೆ ಪತಂಜಲಿ ಮಹರ್ಷಿಗಳು ಯೋಗವನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ದೇವರಹುಬ್ಬಳ್ಳಿಯ ಸಿದ್ದಾಶ್ರಯದ ಶ್ರೀ ಸಿದ್ದ ಶಿವಯೋಗಿಗಳು ಹೇಳಿದರು.
ದೇವರಹುಬ್ಬಳ್ಳಿಯ ಸಿದ್ದಾಶ್ರಮದಲ್ಲಿ ವಿಶ್ವ ಯೋಗ ದಿನಾಚರಣೆ ನಿಮಿತ್ತ ನಡೆಯುತ್ತಿರುವ ಯೋಗಭ್ಯಾಸ ಮತ್ತು ಯೋಗ ಜಾಗೃತಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮನುಕುಲಕ್ಕೆ ಹಿಂದಿನಿಂದಲೂ ಅನೇಕ ರೋಗಾದಿಗಳು ಇದ್ದೇ ಇವೆ. ಅವೆಲ್ಲವುಗಳಿಂದ ಮುಕ್ತವಾಗಿ ಶುದ್ಧ ಆಹಾರ, ಪರಿಶುದ್ಧ ಆಲೋಚನೆ ಮತ್ತು ಉತ್ತಮ ಸಮಾಜ ಕಟ್ಟುವುದಕ್ಕೆ ಯೋಗ ತನ್ನದೇ ಕೊಡುಗೆ ನೀಡುತ್ತ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ವಿಶ್ವಕ್ಕೆ ಯೋಗವನ್ನು ಪರಿಚಯಿಸುತ್ತಿದ್ದಾರೆ. ಹೀಗಾಗಿ ಯೋಗದಂತಹ ದೇಶಿ ಸಂಸ್ಕೃತಿಯಲ್ಲಿನ ವಿಚಾರಗಳನ್ನು ಪ್ರತಿಯೊಬ್ಬರು ಅಳವಡಿಕೊಳ್ಳುವ ಅಗತ್ಯವಿದೆ ಎಂದರು.
ಭಾರತೀಯ ಕುಟುಂಬ ಯೋಜನಾ ಸಂಘದ ಹಿರಿಯ ಅಽಕಾರಿ ನಿಂಗಪ್ಪ ಮಡಿವಾಳರ, ಸಾವಯವ ಕೃಷಿಕ ಗಂಗಾಧರ್ ಹೊಂಗಲ್ ಮತ್ತು ಪಾರ್ಶ್ವನಾಥ ಪರಿಶ್ವಾಡ ಉಪಸ್ತಿತರಿದ್ದರು. ದೇವರಹುಬ್ಬಳ್ಳಿ ಗ್ರಾಮದ ಯುವಕರು, ಶಾಲಾ ಮಕ್ಕಳು ಮತ್ತು ಗ್ರಾಮದ ನಾಗರಿಕರು ಯೋಗ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.