ಯೋಗ ಸ್ಪರ್ಧೆ 12ರಂದು

Published on

ಹುಬ್ಬಳ್ಳಿ: ರೋಟರಿ ಸರಸ್ವತಿ ವಿದ್ಯಾಲಯ ಹಾಗೂ ಯುವ ಯೋಧ ಫೌಂಡೇಷನ್ ಸಹಯೋಗದೊಂದಿಗೆ ವಿಶ್ವ ಯೋಗ ದಿನದ ಪ್ರಯುಕ್ತ 4ನೇ ಬಾರಿ ಯೋಗ ಸ್ಪರ್ಧೆಯನ್ನು ಜೂನ್ 12ರಂದು ಬೆಳಗ್ಗೆ 8.30ಕ್ಕೆ ಗೋಕುಲ ರಸ್ತೆ ಕುಮಾರ ಪಾರ್ಕ್‌ನಲ್ಲಿರುವ ರೋಟರಿ ಸರಸ್ವತಿ ವಿದ್ಯಾಲಯದಲ್ಲಿ ಏರ್ಪಡಿಸಲಾಗಿದೆ.

ವಿಜೇತರಿಗೆ ಟ್ರೋಫಿ ಹಾಗೂ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಅನುಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ನೀಡಲಾಗುತ್ತದೆ. ಅತ್ಯುತ್ತಮ ಯೋಗ ಪ್ರದರ್ಶನ ನೀಡುವವರಿಗೆ ಚಾಂಪಿಯನ್ ಪ್ರಶಸ್ತಿ ನೀಡಲಾಗುವುದು.

ರೋಟರಿ ಸರಸ್ವತಿ ವಿದ್ಯಾಲಯ ಅಧ್ಯಕ್ಷ ಲಿಂಗರಾಜ ಪಾಟೀಲ ಸ್ಪರ್ಧೆ ಉದ್ಘಾಟಿಸುವರು. ವರದಶ್ರೀ ಫೌಂಡೇಷನ್ ಸಂಸ್ಥಾಪಕ ಮಲ್ಲಿಕಾರ್ಜುನ ರಡ್ಡೇರ ವಕ್ತಾರರಾಗಿ ಪಾಲ್ಗೊಳ್ಳುವರು. ಯುವ ಯೋಧ ಫೌಂಡೇಷನ್ ಸಂಸ್ಥಾಪಕ ಮುತ್ತಪ್ಪ ನಲವಡಿ ಅಧ್ಯಕ್ಷತೆ ವಹಿಸುವರು.

ಪತಂಜಲಿ ಯೋಗ ಪೀಠ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ, ವಿನಾಯಕ ಕೊಂಗಿ, ಡಾ. ಪಂಚಲಿಂಗಪ್ಪ ಕವಲೂರ, ಪ್ರಾಂಶುಪಾಲ ಕೀರ್ತಿ ದೇಶಪಾಂಡೆ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net