

ಕಡಬ: ನಿರಂತರ ಯೋಗಾಭ್ಯಾಸದಿಂದ ಶಾಂತಿ, ಸ್ಥೈರ್ಯ ಮತ್ತು ಆರೋಗ್ಯ ಪ್ರಾಪ್ತವಾಗುತ್ತದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಆಲಂಕಾರು ಶ್ರೀ ಭಾರತೀ ಶಾಖೆ ಮತ್ತು ಕೊಲ ಶ್ರೀ ಸದಾಶಿವ ಶಾಖೆಯ ಸಹಯೋಗದೊಂದಿಗೆ ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಯೋಗ ದಿನಾಚರಣೆ ಉದ್ಘಾಟಿಸಿದರು.
ಮಂಗಳೂರು ಮಹಾನಗರ ಸಂಚಾಲಕ ಆನಂದ ಕುಂಟಿನಿ ಆಸನ ಅಭ್ಯಾಸ ತಿಳಿಸಿದರು. ಆಲಂಕಾರು ಶಾಖೆಯ ಯೋಗಬಂಧುಗಳಾದ ಮುತ್ತಪ್ಪ, ಪದ್ಮನಾಭ, ಗಣೇಶ್ ರೈ ಕೆ. ಭಜನೆ, ಅಮೃತವಚನ, ಪಂಚಾಂಗ ಪಠಣ ವಾಚಿಸಿದರು. ಮಾನಸಿಕ ಸಿದ್ಧತೆ ಉಸಿರಾಟ ಕ್ರಿಯೆ, ಗಣಪತಿ ನಮಸ್ಕಾರದ ವಿವರಣೆಯನ್ನು ಶಿಕ್ಷಕ ನಾರಾಯಣ ನೀಡಿದರು. ಆಯುಷ್ ಇಲಾಖೆಯ ಪಠ್ಯಪುಸ್ತಕದ ಆಸನಭ್ಯಾಸವನ್ನು ಯೋಗ ಶಿಕ್ಷಕಿ ಮಲ್ಲಿಕಾ ವಿವರಿಸಿದರು. ಯೋಗಬಂಧುಗಳಾದ ಶರ್ಮಿಳಾ, ಬಾಲಚಂದ್ರ, ಪ್ರತಿಮಾ, ಮುತ್ತಪ್ಪ ಪ್ರಾತ್ಯಕ್ಷಿಕೆ ನೀಡಿದರು. ಯೋಗಶಿಕ್ಷಕರಾದ ಸದಾಶಿವ ಶೆಟ್ಟಿ, ವಾರಂಗ ಉದಯ ಕುಮಾರ್ ರೈ, ಮುರಳೀಕೃಷ್ಣ ಬಡಿಲ, ಜಿಪಂ ಮಾಜಿ ಅಧ್ಯಕ್ಷೆ ಆಶಾತಿಮ್ಮಪ್ಪ ಗೌಡ, ಮುರುಳ್ಯ ಗ್ರಾಪಂ ಉಪಾಧ್ಯಕ್ಷೆ ಜಾನಕಿ, ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಎಸ್.ಟಿ. ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಪೂವಪ್ಪ ನಾಯ್ಕ ಎಸ್., ಸುಳ್ಯಮಂಡಲ ಯುವಮೋರ್ಚಾ ಕಾರ್ಯದರ್ಶಿ ದಿವಾಕರ ಕುಂಬಾರ, ಆಲಂಕಾರು ಶಕ್ತಿ ಕೇಂದ್ರದ ಸಂಚಾಲಕ ಜಯಕರ ಪೂಜಾರಿ ಕಲ್ಲೇರಿ ಮೊದಲಾದವರಿದ್ದರು. ಜನಾರ್ದನ ಕದ್ರ ನಿರೂಪಿಸಿದರು. ನಾರಾಯಣ ವಂದಿಸಿದರು.