

ಕುಮಟಾ: ತಾಲೂಕಿನ ಗೋರೆಯ ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಕಾಲೇಜ್ ಸಂಸ್ಥಾಪಕ ಅಧ್ಯಕ್ಷ ಡಾ. ಜಿ.ಜಿ. ಹೆಗಡೆ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಮಾಡಿಸಿದರು.
ಬಳಿಕ ನುರಿತ ಯೋಗಪಟುಗಳಾದ ನಾಗೇಂದ್ರ ಭಟ್, ಪಿ.ಎನ್. ಹೆಗಡೆ ಮತ್ತು ಲೀಲಾಧರ ಉಪಾಧ್ಯಾಯ ವಿದ್ಯಾರ್ಥಿಗಳಿಂದ ಪ್ರಾಣಾಯಾಮ ಮತ್ತು ವಿವಿಧ ಯೋಗಾಸನಗಳನ್ನು ಮಾಡಿಸಿ, ಆಸನಗಳ ಮಹತ್ವ ತಿಳಿಸಿ ಕೊಟ್ಟರು. ವಿದ್ಯಾರ್ಥಿನಿ ಮೇದಿನಿ ಭಟ್, ಯೋಗ ಮತ್ತು ಅದರ ಉಪಯೋಗದ ಕುರಿತು ಮಾತನಾಡಿದರು. ಪ್ರೊ. ಸುಶ್ಮಿತಾ, ಇತರರಿದ್ದರು. ಉಪನ್ಯಾಸಕರಾದ ಜಿ.ಎಸ್. ಹೆಗಡೆ, ಪ್ರೊ. ಹರ್ಷ ಉಪಾಧ್ಯಾಯ ನಿರ್ವಹಿಸಿದರು.