ಪಿರ್ಯಾಮಿಡ್ ಧ್ಯಾನ ಮಂದಿರದಲ್ಲಿ ಯೋಗ ದಿನಾಚರಣೆ

New Pyriamid
Published on

ಹುಬ್ಬಳ್ಳಿ : ನಗರದ ಪಿರ್ಯಾಮಿಡ್ ಧ್ಯಾನ ಮಂದಿರದಲ್ಲಿ ಶುಕ್ರವಾರದಂದು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.

ಅತಿಥಿಯಾಗಿದ್ದ ಹುಬ್ಬಳ್ಳಿ ಪ್ರಧಾನ ದಿವಾನಿ ನ್ಯಾಯಾಲಯದ ನ್ಯಾಯಾಧೀಶರಾದ ರಾಜಶೇಖರ ತಿಳಗಂಜಿ ಮಾತನಾಡಿ, ಪ್ರತಿಯೊಬ್ಬರೂ ಆರೋಗ್ಯ ಮತ್ತು ನೆಮ್ಮದಿ ಬದುಕಿಗಾಗಿ ನಿತ್ಯ ಯೋಗಾಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.

ಸತ್ಸಂಗ ನಡೆಸಿಕೊಟ್ಟ ವಿಜಯಾ ಬದ್ದಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಪಿರ್ಯಾಮಿಡ್ ಧ್ಯಾನಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ಯೋಗ ತರಬೇತುದಾರ ಡಾ. ರಾಜೇಶ್ವರಿ ಪಟ್ಟಣಶೆಟ್ಟಿ, ಹಿರಿಯ ಧ್ಯಾನ ಗುರುಗಳಾದ ವಿಶಾಲಾಕ್ಷಿ ಆಕಳವಾಡಿ, ನೀಲಕಂಠ ಆಕಳವಾಡಿ, ಬಸವರಾಜ ಹೊಸಮನಿ, ಈಶ್ವರ ವಂಗಿ, ಟಿ.ಎಂ. ಮೆಹರವಾಡೆ, ಸುವರ್ಣ ಸಾಹುಕಾರ, ಗಿರಿಜಾ ಸಂಗೊಳ್ಳಿ, ವಿಷ್ಣುತೀರ್ಥ ಕಲೊ್ಲೕಳಕರ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net