ಆದರ್ಶ ಕಾಲೇಜ್‌ನಲ್ಲಿ ಯೋಗ ದಿನಾಚರಣೆ

h21-adarsha college
Published on

ಹುಬ್ಬಳ್ಳಿ: ಇಲ್ಲಿಯ ಲಿಂಗರಾಜ ನಗರದ ಆದರ್ಶ ಪದವಿಪೂರ್ವ ವಿಜ್ಞಾನ ಕಾಲೇಜ್‌ನಲ್ಲಿ ಶನಿವಾರ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.

ಯೋಗ ಗುರು ಸಂಗಮೇಶ ನಿಂಬರಗಿ ಅತಿಥಿಗಳಾಗಿ ಆಗಮಿಸಿ ಯೋಗದ ಮಹತ್ವ ತಿಳಿಸಿದರು. ಕಪಾಲಭಾತಿ, ಪ್ರಾಣಾಯಾಮ ಸೇರಿದಂತೆ ಹಲವು ಆಸನಗಳನ್ನು ಹೇಳಿಕೊಟ್ಟರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸಾವಕಾರ ಅಧ್ಯಕ್ಷತೆ ವಹಿಸಿದ್ದರು.

ನಿರ್ದೇಶಕರಾದ ಪ್ರೊ.ಬಿ.ಸಿ. ಗೌಡರ, ಪ್ರೊ.ಎಸ್.ಬಿ. ಕುನ್ನೂರ ಮಾತನಾಡಿದರು.

ಸಂಗಮೇಶ ನಿಂಬರಗಿ ಅವರನ್ನು ಸನ್ಮಾನಿಸಲಾಯಿತು.

ನಿರ್ದೇಶಕ ಪ್ರೊ. ಡೇನಿಯಲ್ ಹೊಸಕೇರಿ ಉಪಸ್ಥಿತರಿದ್ದರು. ರಶ್ಮಿತಾ ಶೆಟ್ಟಿ ವಂದಿಸಿದರು. ಕವಿತಾ ಶೇಜವಾಡಕರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net