

ಉಪ್ಪಿನಂಗಡಿ: ಪತಂಜಲಿ ಯೋಗ ಶಿಕ್ಷಣ ಸಮಿತಿ ಉಪ್ಪಿನಂಗಡಿಯ ವಿವಿಧ ಶಾಖೆಗಳ ಆಶ್ರಯದಲ್ಲಿ ಯೋಗ ವಾರ್ಷಿಕ ಹಬ್ಬವನ್ನು ಉಪ್ಪಿನಂಗಡಿ ನೇತ್ರಾವತಿ ಸಮುದಾಯ ಭವನದಲ್ಲಿ ಆಚರಿಸಲಾಯಿತು.
ಶ್ರೀ ಸಹಸ್ರಲಿಂಗೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಸದಸ್ಯ ಅರ್ತಿಲಕೃಷ್ಣ ರಾವ್, ಪತ್ರಕರ್ತ ಉದಯ ಕುಮಾರ್, ವಕೀಲ ಸಂತೋಷ್ಕುಮಾರ್, ಅರ್ಚಕ ರಾಜೇಂದ್ರ, ಯೋಗ ಬಂಧು ಶಶಿ ಉದ್ಘಾಟಿಸಿದರು. ಡಾ.ಶ್ರುತಿ ಪಾರ್ವತಿ ಯೋಗದ ಮಹತ್ವ ವಿವರಿಸಿದರು. ಡಾ.ಗೋವಿಂದಪ್ರಸಾದ್ ಕಜೆ, ಯಶೋಧರ ಆಚಾರ್ಯ, ಮೋಹಿನಿ, ಹೇಮಲತಾ, ಶ್ವೇತಾ, ಆಶಾ, ರಾಜೇಶ್, ಶೇಖರ್, ಆಶಾ ಭಟ್, ಸಂಜೀವ, ಪ್ರದೀಪ್, ಪೂರ್ವಿ, ವಿಜೇತಾ, ಭುವನೇಶ್ವರಿ ರೈ, ವರಪ್ರಸಾದ್, ಪುರಂದರ ಬಾರ್ಲ, ರಾಜೇಶ್, ರಾಮಣ್ಣ ಸಪಲ್ಯ, ಹರೀಶ್ ಆಚಾರ್ಯ, ಚಂದ್ರಾವತಿ, ಸುಜಾತಕೃಷ್ಣ ಆಚಾರ್ಯ, ವೀಣಾ ಕಜೆ, ಶೋಭಾ ಮೊದಲಾದವರಿದ್ದರು.