

ಹುಬ್ಬಳ್ಳಿ : ಅಂತಾರಾಷ್ಟ್ರೀಯ ಯೋಗ ಹಾಗೂ ವಿಶ್ವ ಸಂಗೀತ ದಿನಾಚರಣೆಯನ್ನು ಇಲ್ಲಿಯ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಕೇಂದ್ರೀಯ ಶಾಲೆಯಲ್ಲಿ ಶನಿವಾರ ಆಯೋಜಿಸಲಾಗಿತ್ತು.
ಮುಖೊ್ಯೕಪಾಧ್ಯಾಯರಾದ ರಜನಿ ಪಾಟೀಲ ಹಾಗೂ ಸಹ ಸಂಯೋಜಕರ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಯೋಗಾಸನದಲ್ಲಿ ಪಾಲ್ಗೊಂಡಿದ್ದರು.
ಆಧುನಿಕ ದಿನದಲ್ಲಿ ಮನುಷ್ಯನ ಜೀವನ ಯಾಂತ್ರಿಕತೆಯಿಂದ ಕೂಡಿದೆ. ಅದರ ನಿರ್ವಹಣೆ ಕೇವಲ ಯೋಗ ಮತ್ತು ಸಂಗೀತದಿಂದ ಸಾಧ್ಯ. ಸದೃಢ ದೇಹಕ್ಕೆ ಸದೃಢ ಮನಸ್ಸು ತುಂಬ ಮುಖ್ಯ. ಯೋಗಾಸನದ ಪ್ರತಿ ಹಂತವು ಮನುಷ್ಯನ ಜೀವನದ ಉತ್ಸಾಹವನ್ನು ಹೆಚ್ಚಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.
ಸೂರ್ಯ ನಮಸ್ಕಾರ, ಭುಜಂಗಾಸನ ಇನ್ನೂ ಹಲವು ಯೋಗಾಸನಗಳನ್ನು ಪ್ರದರ್ಶಿಸಲಾಯಿತು.