ಯೋಗ ದಸರಾದ ಕಾರ್ಯಕ್ರಮಗಳ ಪಟ್ಟಿ ಬಿಡುಗಡೆ

yoga
Published on

ಮೈಸೂರು: ಯೋಗಾ ದಸರಾ ಉಪ ಸಮಿತಿ ವತಿಯಿಂದ ಸೆ.26 ರಿಂದ ಅ.3ರವರೆಗೆ ಯೋಗ ದಸರಾ ಹಮ್ಮಿಕೊಳ್ಳಲಾಗಿದ್ದು, ಒಂದು ವಾರ ನಡೆಯುವ ಕಾರ್ಯಕ್ರಮಗಳ ಪಟ್ಟಿಯನ್ನು ಸಮಿತಿ ಬಿಡುಗಡೆ ಮಾಡಿದೆ.

ಸೆ.26 ರಂದು ಸಂಜೆ 5 ರಿಂದ ರಾತ್ರಿ 8ರವರೆಗೆ ನಗರದ ಓವಲ್ ಮೈದಾನದಲ್ಲಿ ಯೋಗ ದಸರಾ ಉದ್ಘಾಟನೆ ಹಾಗೂ ಯೋಗ ನೃತ್ಯ ರೂಪಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 27 ರಂದು ಬೆಳಗ್ಗೆ 8 ರಿಂದ 9ರವರೆಗೆ ಜನಪ್ರತಿಧಿಗಳು, ಮಾಧ್ಯಮ ಪ್ರತಿನಿಧಿಗಳಿಗೆ ಸರಸ್ವತಿಪುರಂನ ಜವರೇಗೌಡ ಉದ್ಯಾನದಲ್ಲಿ ‘ಯೋಗವಾಹಿನಿ’ ಯೋಗಾಭ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ.

28 ರಂದು ಬೆಳಗ್ಗೆ 6 ರಿಂದ 8ರವರೆಗೆ ಅರಮನೆ ಆವರಣದಲ್ಲಿ ‘ಯೋಗ ಸಂಭ್ರಮ’ ಸಾಮೂಹಿಕ ಯೋಗಭ್ಯಾಸ ಮತ್ತು ಸ್ವಾತಂತ್ರೃದ ಅಮೃತ ಮಹೋತ್ಸವ ಪ್ರಯುಕ್ತ 75 ಯೋಗಾಸನಗಳ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 29 ರಂದು ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಮೈಸೂರು ದಸರಾ ಮತ್ತು ಪ್ರದರ್ಶನ ಪ್ರಾಧಿಕಾರದ ಪಿ. ಕಾಳಿಂಗರಾವ್ ಸಭಾಂಗಣದಲ್ಲಿ ರಾಜ್ಯಮಟ್ಟದ ದಸರಾ ಯೋಗಾಸನ ಸ್ಪರ್ಧೆ ಏರ್ಪಡಿಸಲಾಗಿದೆ.

30 ರಂದು ಬೆ.6 ರಿಂದ 9ರವರೆಗೆ ಅರಮನೆ ಆವರಣದಲ್ಲಿ ಯೋಗಾಸರಪಳಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಯೋಗಾಸಕ್ತರು ಪಾಲ್ಗೋಳ್ಳುವರು. ಅ.1 ರಂದು ಬೆಳಗ್ಗೆ 6 ರಿಂದ 8ರವರೆಗೆ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ ಆವರಣದಲ್ಲಿ ಗ್ರಾಮೀಣ ಯೋಗ ದಸರಾ ಹಮ್ಮಿಕೊಳ್ಳಲಾಗಿದ್ದು, ಸಾಮೂಹಿಕ ಯೋಗಭ್ಯಾಸ ಮತ್ತು ಸೂರ್ಯ ನಮಸ್ಕಾರ ನಡೆಯಲಿದೆ. ಅ.3 ರಂದು ಬೆ.6 ರಿಂದ 8ರವರೆಗೆ ಚಾಮುಂಡಿಬೆಟ್ಟದ ತಪ್ಪಲು ಮತ್ತು ದೇವಸ್ಥಾನ ಆವರಣದಲ್ಲಿ ಯೋಗ ಚಾರಣ ಮತ್ತು ದುರ್ಗಾ ನಮಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net