

ಸುಬ್ರಹ್ಮಣ್ಯ: ದ.ಕ. ಜಿಪಂ, ಸುಳ್ಯ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗ ಆಶ್ರಯದಲ್ಲಿ ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ನಡೆದ ತಾಲೂಕುಮಟ್ಟದ 14 ಹಾಗೂ 17ರ ವಯೋಮಾನದ ಬಾಲಕ ಬಾಲಕಿಯರ ಯೋಗಾಸನ ಸ್ಪರ್ಧೆಯ ವಿವಿಧ ವಿಭಾಗದಲ್ಲಿ ಸುಮಾರು 20 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
17ರ ವಯೋಮಾನ ಬಾಲಕರ ವಿಭಾಗ: ಸಾಂಪ್ರದಾಯಿಕ ಯೋಗಾಸನದಲ್ಲಿ ಪ್ರಥಮ ತನುಷ್ ಎಂ.ಎಚ್. ಜ್ಞಾನದೀಪ ಎಲಿಮಲೆ, ದ್ವಿತೀಯ ಮೆರ್ಮೆ ಭಾಂಗ್ ಸತ್ಯಸಾಯಿ ಚೊಕ್ಕಾಡಿ, ತೃತೀಯ ಲೋಹಿತ್ ಎಸ್‌ಎಸ್‌ಪಿಯು ಸುಬ್ರಹ್ಮಣ್ಯ. ಆರ್ಟಿಸ್ಟಿಕ್ ಫೇರ್ ವಿಭಾಗದಲ್ಲಿ ಪ್ರಥಮ ಪೃಥ್ವಿ ಎನ್.ಎಲ್. ಮತ್ತು ಮೆರ್ಮೆ ಭಾಂಗ್ ಸತ್ಯಸಾಯಿ ಚೊಕ್ಕಾಡಿ, ಆರ್ಟಿಸ್ಟಿಕ್ ಸಿಂಗಲ್ ವಿಭಾಗದಲ್ಲಿ ಪ್ರಥಮ ತನುಷ್ ಎಂ.ಎಚ್. ಜ್ಞಾನದೀಪ ಎಲಿಮಲೆ, ದ್ವಿತೀಯ ನಿಶಾಂತ್ ಗೌಡ ಸತ್ಯಸಾಯಿ ಚೊಕ್ಕಾಡಿ, ರಿಧಮಿಕ್ ಫೇರ್ ವಿಭಾಗದಲ್ಲಿ ಪ್ರಥಮ ಪೃಥ್ವಿ ಎನ್.ಎಲ್. ಮತ್ತು ನಿಶಾಂತ್ ಗೌಡ ಸತ್ಯಸಾಯಿ ಚೊಕ್ಕಾಡಿ ಬಹುಮಾನ ಪಡೆದರು.
17ರ ವಯೋಮಾನ ಬಾಲಕಿಯರ ವಿಭಾಗ: ಸಾಂಪ್ರದಾಯಿಕ ಯೋಗಾಸನದಲ್ಲಿ ಪ್ರಥಮ ದೀಕ್ಷಾ ಸರ್ಕಾರಿ ಪ್ರೌಢಶಾಲೆ ಎಲಿಮಲೆ, ದ್ವಿತೀಯ ಸಿಂಚನಾ ರೈ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ, ತತೀಯ ಕೃಷ್ಣ್ಣಾ ವಿವೇಕಾನಂದ ಪ್ರೌಢಶಾಲೆ ಜಾಲ್ಸೂರ್, ಆರ್ಟಿಸ್ಟಿಕ್ ಫೇರ್ ವಿಭಾಗದಲ್ಲಿ ಪ್ರಥಮ ಕೀರ್ತನಾ ಎಂ.ಎನ್. ಮತ್ತು ಸ್ಫೂರ್ತಿ ಸುರೇಶ್ ಯರಗುಡಿ ಸತ್ಯಸಾಯಿ ಚೊಕ್ಕಾಡಿ, ದ್ವಿತೀಯ ಕೃಷ್ಣಾ ಪಿ.ಎಚ್. ಮತ್ತು ಅನ್ವಿತಾ ಕೆ.ವಿ. ವಿವೇಕಾನಂದ ಪ್ರೌಢಶಾಲೆ ಜಾಲ್ಸೂರ್. ಆರ್ಟಿಸ್ಟಿಕ್ ಸಿಂಗಲ್ ವಿಭಾಗದಲ್ಲಿ ಪ್ರಥಮ ದೀಕ್ಷಾ ಸರ್ಕಾರಿ ಪ್ರೌಢಶಾಲೆ ಎಲಿಮಲೆ, ದ್ವಿತೀಯ ಸುಧೀಕ್ಷಾ ಸತ್ಯಸಾಯಿ ಚೊಕ್ಕಾಡಿ, ತೃತೀಯ ಕೃಷ್ಣಾ ವಿವೇಕಾನಂದ ಪ್ರೌಢಶಾಲೆ ಜಾಲ್ಸೂರ್. ರಿಧಮಿಕ್ ಫೇರ್ ವಿಭಾಗದಲ್ಲಿ ಪ್ರಥಮ ಸಂಸ್ಕೃತಿ ಮತ್ತು ಸುಧೀಕ್ಷಾ ಸತ್ಯಸಾಯಿ ಚೊಕ್ಕಾಡಿ ಬಹುಮಾನ ಪಡೆದರು.
14ರ ವಯೋಮಾನ ಬಾಲಕರ ವಿಭಾಗ: ಸಾಂಪ್ರದಾಯಿಕ ಯೋಗಾಸನದಲ್ಲಿ ಪ್ರಥಮ ಶೌರ್ಯ ಎ.ಸಿ. ಸೇಂಟ್ ಜೋಸೆಫ್ ಸುಳ್ಯ, ದ್ವಿತೀಯ ರೋಷನ್ ಪಿ.ಜೆ. ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ, ತೃತೀಯ ರಿತೇಶ್ ತುಂಗ ಸತ್ಯಸಾಯಿ ವಿದ್ಯಾಕೇಂದ್ರ ಚೊಕ್ಕಾಡಿ, ಆರ್ಟಿಸ್ಟಿಕ್ ಫೇರ್ ವಿಭಾಗದಲ್ಲಿ ಪ್ರಥಮ ಶ್ರೀಶೌರ್ಯ ಎ.ಸಿ. ಮತ್ತು ಅಕ್ಷರ್ ಯು. ಸೈಂಟ್ ಜೋಸೆಫ್ ಸುಳ್ಯ, ದ್ವಿತೀಯ ಭರತ್ ಎನ್.ಪಿ. ಮತ್ತು ಶೌರ್ಯ ಸತ್ಯಸಾಯಿ ಚೊಕ್ಕಾಡಿ, ವಿವೇಕಾನಂದ ಪ್ರೌಢಶಾಲೆ ಜಾಲ್ಸೂರ್. ತೃತೀಯ ಕಿರಣ್ ಹಲಗಪ್ಪ ಕಳಸಪ್ಪನವರ್ ಮತ್ತು ಅಭಯ್ ಟೋಂಗಲ್ ಸರ್ಕಾರಿ ಪ್ರಾಥಮಿಕ ಶಾಲೆ ಸುಬ್ರಹ್ಮಣ್ಯ, ಆರ್ಟಿಸ್ಟಿಕ್ ಸಿಂಗಲ್ ವಿಭಾಗದಲ್ಲಿ ಪ್ರಥಮ ರಿತೇಶ್ ತುಂಗ ಸತ್ಯಸಾಯಿ ವಿದ್ಯಾಕೇಂದ್ರ ಚೊಕ್ಕಾಡಿ, ದ್ವಿತೀಯ ಕೌಶಿಕ್ ಕೆ.ಎಂ. ಕೆಪಿಎಸ್ ಬೆಳ್ಳಾರೆ, ತೃತೀಯ ಶ್ರೀಶೌರ್ಯ ಎ.ಸಿ. ಮತ್ತು ಅಕ್ಷರ್ ಯು. ಸೇಂಟ್ ಜೋಸೆಫ್ ಸುಳ್ಯ, ಕಿರಣ್ ಹಲಗಪ್ಪ ಕಳಸಪ್ಪನವರ್ ಮತ್ತು ಅಭಯ್ ಟೋಂಗಲ್ ಸರ್ಕಾರಿ ಪ್ರಾಥಮಿಕ ಶಾಲೆ ಸುಬ್ರಹ್ಮಣ್ಯ, ಜಸ್ವಿನ್ ಡಿ.ವಿ. ಮತ್ತು ಶಿವರಾಜ್ ರಾಮಣ್ಣ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆ ವಿನೋಭನಗರ ಬಹುಮಾನ ಪಡೆದರು.
14ರ ವಯೋಮಾನ ಬಾಲಕಿಯರ ವಿಭಾಗ: ಸಾಂಪ್ರದಾಯಿಕ ಯೋಗಾಸನದಲ್ಲಿ ಪ್ರಥಮ ಸೋನಾ ಸೇಂಟ್ ಜೋಸೆಫ್ ಸುಳ್ಯ, ದ್ವಿತೀಯ ವರ್ಷಾ ಕೆ.ಜಿ. ಎಸ್.ಎಸ್.ಪಿ.ಯು. ಸುಬ್ರಹ್ಮಣ್ಯ, ತೃತೀಯ ತನ್ವಿ ಟಿ.ಚೊಕ್ಕಾಡಿ ಬಹುಮಾನ ಪಡೆದರು.
ಬಹುಮಾನ ವಿತರಣೆ: ವಿಜೇತರಿಗೆ ಬಹುಮಾನವನ್ನು ಉಪನ್ಯಾಸಕ ಚಂದ್ರಶೇಖರ ಶೆಟ್ಟಿ, ಮುಖ್ಯಶಿಕ್ಷಕಿ ನಂದಾ ಹರೀಶ್, ಯೋಗ ಶಿಕ್ಷಕ ವಿಜಯೇಶ್ ಬಿಳಿನೆಲೆ, ಹಿರಿಯ ಸಹ ಶಿಕ್ಷಕ ಎಂ.ಕೃಷ್ಣ ಭಟ್ ಬಹುಮಾನ ವಿತರಿಸಿದರು.