ಯೋಗ ಶಿಬಿರಕ್ಕೆ ಚಾಲನೆ

IMG-20231001-WA0020.jpg
Published on

ಹುಬ್ಬಳ್ಳಿ: ಇಲ್ಲಿಯ ಬಸವೇಶ್ವರ ನಗರ ಸಮುದಾಯ ಭವನದಲ್ಲಿ ಪತಂಜಲಿ ಯೋಗ ಸಮಿತಿ ಮತ್ತು ಬಸವೇಶ್ವರನಗರ ನಿವಾಸಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ವಿಶೇಷ ಯೋಗ ಶಿಬಿರಕ್ಕೆ ಭಾನುವಾರ ಚಾಲನೆ ನೀಡಲಾಯಿತು.

ನೇತೃತ್ವ ವಹಿಸಿದ್ದ ಪತಂಜಲಿ ಯೋಗ ಪೀಠ ಕರ್ನಾಟಕ ರಾಜ್ಯ ಪ್ರಭಾರಿ ಯೋಗಗುರು ಭವರಲಾಲ್ ಆರ್ಯ ಅವರು ಮಾತನಾಡಿ, ಯೋಗವು ರೋಗಿಗೆ ಚಿಕಿತ್ಸಾ ಪದ್ಧತಿ, ಸಾಧಕನಿಗೆ ಸಾಧನಾ ಪದ್ಧತಿ, ಯೋಗಿಗೆ ಜೀವನ ಪದ್ಧತಿಯಾಗಿದೆ. ದಿನದ 24 ಗಂಟೆಗಳಲ್ಲಿ ಒಂದು ಗಂಟೆ ಯೋಗಕ್ಕಾಗಿ ಮೀಸಲಿಡಬೇಕು. ನಿತ್ಯ ಯೋಗ ಅಭ್ಯಾಸ ಮಾಡುವುದರಿಂದ ನಮ್ಮೆಲ್ಲ ಕೆಲಸಗಳು ತುಂಬಾ ಚೆನ್ನಾಗಿ ಆಗುತ್ತವೆ ಎಂದರು.

ಮಹಾನಗರದ ಎಲ್ಲ ವಾರ್ಡ್ಗಳಲ್ಲಿ ಒಂದೊಂದು ಉಚಿತ ಯೋಗ ಕೇಂದ್ರಗಳನ್ನು ಸ್ಥಾಪಿಸಿ ಯೋಗಮಯ ಆರೋಗ್ಯಮಯ ಮಹಾನಗರವನ್ನಾಗಿಸುವ ಅಭಿಯಾನಕ್ಕೆ ಶಿಬಿರದ ಮೂಲಕ ಚಾಲನೆ ನೀಡಿದ್ದೇವೆ. ನಗರದ ಎಲ್ಲ ಸಾಂಸತಿಕ, ಸಾಮಾಜಿಕ ಸಂಘ ಸಂಸ್ಥೆಗಳು, ಯೋಗಾಸಕ್ತರು, ಯೋಗ ಪ್ರೇಮಿಗಳು ಸಹಕಾರ ನೀಡಬೇಕು ಎಂದರು.

ಶಿಬಿರ ಉದ್ಘಾಟಿಸಿದ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಯೋಗ ನಮ್ಮ ಜೀವನ ಪದ್ಧತಿಯಾಗಬೇಕು. ವಿಶ್ವಕ್ಕೆ ಭಾರತ ನೀಡಿದ ಅತ್ಯಂತ ಶ್ರೇಷ್ಠ ಕೊಡುಗೆಯಾಗಿದೆ. ಯೋಗಮಯ ಆರೋಗ್ಯಮಯ ಮಹಾನಗರ ಅಭಿಯಾನಕ್ಕೆ ಸಂರ್ಪೂಣ ಸಹಕಾರ ನೀಡುತ್ತೇವೆ ಎಂದು ಹೇಳಿದರು.

ಮೇಯರ್ ವೀಣಾ ಬರದ್ವಾಡ ಮಾತನಾಡಿ, ಯೋಗದಿಂದ ಶರೀರ ಮತ್ತು ಮನಸ್ಸು ಅರೋಗ್ಯಯುತವಾಗಿರುತ್ತದೆ. ಆರೋಗ್ಯ ಇದ್ದರೆ ನಾವು ಏನನ್ನು ಬೇಕಾದರೂ ಸಾಧಿಸಬಹುದು ಎಂದರು.

ಶಿಬಿರದ ನಂತರ ಸಮುದಾಯ ಭವನ ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಪತಂಜಲಿ ಯೋಗ ಸಮಿತಿಯ ವಾಮನ ಶಾನುಭಾಗ್, ಮೋಹನ ಬರಮಕ್ಕನವರ, ಶೋಭಾ ಬರಮಕ್ಕನವರ್, ಪರಶುರಾಮ ಮೂಲಪ್ಪನವರ್, ಡಾ. ಹಿರೇಗೌಡರ, ರ್ಪೂಣಿಮಾ ಹರವಿ, ಬಸವರಾಜ ಹರವಿ, ಲತಾ ಮುಧೋಳ, ರಮೇಶ ಶೆಟ್ಟಿ, ಹಷಿರ್ತಾ, ಮಹೇಶ ಕೊಟ್ಟಿಗೆರೆ, ರಾಜಶೇಖರ ಕುದರಿ, ಮಧುಸೂದನ, ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net