

ಹುಬ್ಬಳ್ಳಿ : ಇಲ್ಲಿನ ಗೋಕುಲ ರಸ್ತೆ ಬಸವೇಶ್ವರ ನಗರದ ಸಮುದಾಯ ಭವನದಲ್ಲಿ ಪತಂಜಲಿ ಯೋಗ ಸಮಿತಿ ಮತ್ತು ಬಸವೇಶ್ವರ ನಗರ ನಿವಾಸಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ 3 ದಿನಗಳ ವಿಶೇಷ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ಶಿಬಿರವನ್ನು ಅ. 1 ರಿಂದ 3ರವರೆಗೆ ಬೆಳಗ್ಗೆ 6 ಗಂಟೆಯಿಂದ 7.30ರವರೆಗೆ ಆಯೋಜಿಸಲಾಗಿದೆ.
ಪತಂಜಲಿ ಯೋಗ ಪೀಠ ಕರ್ನಾಟಕದ ವರಿಷ್ಠ ರಾಜ್ಯಪ್ರಭಾರಿ ಯೋಗಗುರು ಭವರಲಾಲ್ ಆರ್ಯ ಅವರ ಉಪಸ್ಥಿತಿಯಲ್ಲಿ ಮೇಯರ್ ವೀಣಾ ಬರದ್ವಾಡ ಹಾಗೂ ಶಾಸಕ ಮಹೇಶ ಟೆಂಗಿನಕಾಯಿ ವಿಶೇಷ ಯೋಗ ಶಿಬಿರ ಉದ್ಘಾಟಿಸುವರು.
ಯೋಗಗುರು ಭವರಲಾಲ್ ಆರ್ಯ ಅವರಿಂದ 3 ದಿನಗಳವರೆಗೆ ಯೋಗ ಮಾರ್ಗದರ್ಶನ ಇರುತ್ತದೆ. ಹುಬ್ಬಳ್ಳಿ -ಧಾರವಾಡ ಮಹಾನಗರದ ಪ್ರತಿ ವಾರ್ಡ್ನಲ್ಲಿ ನಿರಂತರ ಉಚಿತ ಯೋಗ ಕೇಂದ್ರಗಳನ್ನು ಸ್ಥಾಪಿಸಿ, ಯೋಗಮಯ ಹಾಗೂ ಆರೋಗ್ಯಮಯ ಮಹಾನಗರ ಅಭಿಯಾನಕ್ಕೆ ಈ ಯೋಗ ಶಿಬಿರದ ಮೂಲಕ ಚಾಲನೆ ನೀಡಲಾಗುವುದು.
ಈ ಶಿಬಿರವು ಸಂಪೂರ್ಣ ಉಚಿತವಾಗಿದ್ದು, ಅವಳಿ ನಗರದ ಜನತೆ ಈ ವಿಶೇಷ ಯೋಗ ಶಿಬಿರದ ಪ್ರಯೋಜನ ಪಡೆದುಕೊಳ್ಳಲು ಭವರಲಾಲ್ ಆರ್ಯ ತಿಳಿಸಿದ್ದಾರೆ.