ಜಯ ಮುದ್ದು ಶೆಟ್ಟಿ ಕಾರ್ಯ ಸ್ತುತ್ಯರ್ಹ : ಡಾ.ಹರಿಕೃಷ್ಣ ಪುನರೂರು ಬಣ್ಣನೆ

New Project (58)
Published on

ಮೂಲ್ಕಿ: ಯೋಗ ತರಬೇತಿ ಮೂಲಕ ಆರೋಗ್ಯವನ್ನು ಸರ್ವರಿಗೆ ಉಚಿತವಾಗಿ ನೀಡುವ ಯೋಗ ಗುರು ಜಯ ಮುದ್ದು ಶೆಟ್ಟಿ ಅವರ ಕಾರ್ಯ ಸ್ತುತ್ಯರ್ಹ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಹೇಳಿದರು.

ಮೂಲ್ಕಿ ಗಾಂಧಿ ಮೈದಾನದಲ್ಲಿ ಮೂಲ್ಕಿ ನ.ಪಂ., ಮೂಲ್ಕಿ ತಾಲೂಕು ಅಖಿಲ ಭಾರತ ಸಾಹಿತ್ಯ ಪರಿಷತ್, ವಿವಿಧ ಸೇವಾ ಸಂಸ್ಥೆ ಸಹಕಾರದೊಂದಿಗೆ ಕೆಂಚನಕೆರೆ ಪತಂಜಲಿ ಯೋಗ ಕೇಂದ್ರದ ಯೋಗ ಗುರು ಜಯ ಮುದ್ದು ಶೆಟ್ಟಿ ಮಾರ್ಗದರ್ಶನದಲ್ಲಿ 7 ದಿನಗಳ ಕಾಲ ನಡೆದ ಸಾರ್ವಜನಿಕ ಯೋಗ ಶಿಬಿರ ಸಮಾರೋಪದಲ್ಲಿ ಯೋಗ ಗುರುಗಳನ್ನು ಗೌರವಿಸಿ ಮಾತನಾಡಿದರು.

ಯೋಗ ಗುರು ಜಯ ಮುದ್ದು ಶೆಟ್ಟಿ ಮಾತನಾಡಿ, ನಿಯಮಿತ ಯೋಗಾಭ್ಯಾಸ ಉತ್ತಮ ಆರೋಗ್ಯ ನೀಡುತ್ತದೆ. ಇಲ್ಲಿ ಕಲಿತ ಯೋಗಾಭ್ಯಾಸ ಮುಂದುವರಿಸಬೇಕು ಹಾಗೂ ಇನ್ನಿತರಿಗೆ ಕಲಿಸುವುದು ಗುರುದಕ್ಷಿಣೆಯಾಗಿದೆ ಎಂದರು.

ಯೋಗಾಭ್ಯಾಸದಿಂದ ಮಧುಮೇಹ ಇನ್ನಿತರ ರೋಗ ನಿವಾರಣೆಗೊಂಡ ಸದಸ್ಯರು ಮಾಹಿತಿ ನೀಡಿದರು. ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಸುನೀಲ್ ಆಳ್ವ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net