ಮನಸ್ಸಿನ ಚಂಚಲತೆ ನಿಯಂತ್ರಣಕ್ಕೆ ಪ್ರಾಣಾಯಾಮ -ಸ್ವಾಮಿ ಜಿತಕಾಮಾನಂದಜೀ

mng-11dec-ramakrishna
Published on


ಮಂಗಳೂರು : ನಗರದ ಮಂಗಳಾದೇವಿ ರಾಮಕೃಷ್ಣ ಮಠದಲ್ಲಿ ತಿಂಗಳ ಯೋಗ ಶಿಬಿರವನ್ನು ಸ್ವಾಮಿ ಜಿತಕಾಮಾನಂದಜೀ ಉದ್ಘಾಟಿಸಿದರು.
ಪ್ರಾಣಾಯಾಮವು ಉಸಿರಾಟದ ಮೇಲೆ ಹಿಡಿತವುಂಟು ಮಾಡುವುದಲ್ಲದೆ ಶ್ವಾಸಕೋಶದ ಮತ್ತು ನರಮಂಡಲದ ಸಾಮರ್ಥ್ಯವನ್ನುಹೆಚ್ಚಿಸುತ್ತದೆ. ನಾಡಿ ಶುದ್ಧಿಯಾಗಿ ಮನಸ್ಸಿನ ಚಂಚಲತೆ ದೂರವಾಗಿ ಮನಸ್ಸು ಶಾಂತವಾಗುವುದು. ಪ್ರಾಣಾಯಾಮವು ಪ್ರಾಚೀನ ಉಸಿರಾಟದ ತಂತ್ರವಾಗಿದ್ದು, ಇದು ಭಾರತದಲ್ಲಿ ಯೋಗ ಅಭ್ಯಾಸಗಳಿಂದ ಹುಟ್ಟಿಕೊಂಡಿದೆ. ಪ್ರಾಣಾಯಾಮ ಅಭ್ಯಾಸದಿಂದ
ಬರುವ ಅನೇಕ ಆರೋಗ್ಯ ಪ್ರಯೋಜನಗಳಿಂದಾಗಿ ಪಾಶ್ಚಿಮಾತ್ಯ ಜಗತ್ತಿನಲ್ಲಿ ಇದು ಜನಪ್ರಿಯತೆ ಗಳಿಸಿದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಡಾ. ಜೀವರಾಜ ಸೊರಕೆ ಯೋಗದ ಪ್ರಯೋಜನ ಮಾಹಿತಿ ನೀಡಿದರು.
ಯೋಗ ಗುರು ಗೋಪಾಲಕೃಷ್ಣ ದೇಲಂಪಾಡಿ , ಶಿಷ್ಯರಾದ ತುಕಾರಾವ, ಚಂದ್ರಹಾಸ ಬಾಳ , ಶ್ರೀಲಕ್ಷ್ಮಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net