ಮನಸಿನ ಆರೋಗ್ಯಕ್ಕೆ ಆಧ್ಯಾತ್ಮಿಕ ಚಿಂತನೆ ಮುಖ್ಯ,ಭಗವದ್ಗೀತಾ ಜ್ಞಾನಲೋಕ ಮ್ಯೂಸಿಯಂ ನಿರ್ದೇಶಕ ರಾಜಋಷಿ ಅನಿಸಿಕೆ

IMG-20230617-WA0015-1.jpg
Published on

ಹುಬ್ಬಳ್ಳಿ: ಭೈರಿದೇವರಕೊಪ್ಪದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಭಗವದ್ಗೀತಾ ಜ್ಞಾನಲೋಕ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಇಲ್ಲಿಯ ಅಮರಗೋಳದ ಅಜ್ಜಪ್ಪ ಹೊರಕೇರಿ ಅವರ ಪ್ಲಾಟ್ನಲ್ಲಿ ಯೋಗ ಶಿಬಿರ ಹಾಗೂ ಶರಣರು ಕಂಡ ಶಿವ ಪ್ರವಚನ ಮಾಲೆ ಹಮ್ಮಿಕೊಳ್ಳಲಾಗಿದೆ.

ಜುಲೈ 15ರ ವರೆಗೆ ನಿತ್ಯ ಬೆಳಗ್ಗೆ 6ರಿಂದ 7ರವರೆಗೆ ಯೋಗ ಹಾಗೂ ಸಂಜೆ 6ರಿಂದ ಪ್ರವಚನ ನಡೆಯಲಿದೆ.

ಗಿಡಗಳಿಗೆ ನೀರು ಎರೆಯುವ ಮೂಲಕ ಗುರುವಾರ ಪ್ರವಚನ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಹುಬ್ಬಳ್ಳಿಯ ಭಗವದ್ಗೀತಾ ಜ್ಞಾನಲೋಕ ಮ್ಯೂಸಿಯಂನ ನಿರ್ದೇಶಕ, ಪ್ರವಚನಕಾರ ಡಾ. ಬ್ರಹ್ಮಕುಮಾರ ಬಸವರಾಜ ರಾಜಋಷಿ ಅವರು ಮಾತನಾಡಿ, ಶರೀರದ ಆರೋಗ್ಯಕ್ಕೆ ಯೋಗಾಸನ, ವ್ಯಾಯಾಮ ಎಷ್ಟು ಮುಖ್ಯವೋ ಮನಸಿನ ಆರೋಗ್ಯಕ್ಕೆ ಆಧ್ಯಾತ್ಮಿಕ ಚಿಂತನೆ, ಧ್ಯಾನವು ಬಹಳಷ್ಟು ಮುಖ್ಯವಾದುದು ಎಂದರು.

ಜೀವನವೆಂದರೆ ಕೇವಲ ಹುಟ್ಟುವುದು, ಶಿಕ್ಷಣ ಕಲಿಯುವುದು, ನೌಕರಿ ಮಾಡಿ ಹಣ ಸಂಪಾದನೆ ಮಾಡಿ, ಮದುವೆ ಹಾಗೂ ಮಕ್ಕಳಿಗೆ ಜನ್ಮವನ್ನು ಕೊಟ್ಟು ಒಂದು ದಿನ ಜೀವನದ ಸಂತೆಯನ್ನು ಮುಗಿಸಿಕೊಂಡು ಹೋಗುವುದಷ್ಟೆ ಅಲ್ಲ. ಬಾಲ್ಯದಿಂದ ವದ್ಧಾಪ್ಯದವರೆಗಿನ ದೀರ್ಘ ಸಮಯವನ್ನು ಜೀವನ ನಿರ್ವಹಣೆಗಾಗಿ ಕರ್ಮಗಳನ್ನು ಮಾಡುತ್ತ ಜತೆಯಲ್ಲಿ ಶಿವಧ್ಯಾನವನ್ನು, ಶರಣರ ಮೌಲ್ಯಗಳನ್ನು ಧಾರಣೆ ಮಾಡಿಕೊಳ್ಳುವುದು ಅಷ್ಟೆ ಅವಶ್ಯಕವಾಗಿದೆ ಎಂದರು.

ಡಾ. ವಿಜಯಕುಮಾರ, ಪಾಲಿಕೆ ಮಾಜಿ ಸದಸ್ಯ ಅಜ್ಜಪ್ಪ ಹೊರಕೇರಿ, ಬ್ರಹ್ಮಕುಮಾರಿ ನಿರ್ಮಲಾಜಿ ಉಪಸ್ಥಿತರಿದ್ದರು. ಬ್ರಹ್ಮಕುಮಾರಿ ವಿಜಯಕ್ಕ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net