ದೇಹ, ಮನಸ್ಸನ್ನು ಒಟ್ಟಿಗೆ ತರುವ ಯೋಗ

kls1 (6)
Published on

ಕಳಸ: ಕಳಸ ಶ್ರೀ ಅನ್ನಪೂರ್ಣೇಶ್ವರೀ ಮಹಿಳಾ ಮಂಡಳಿಯಿಂದ ಸೋಮವಾರ ಮಂಡಳಿ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಡೆಸಲಾಯಿತು. ಯೋಗ ಗುರು ಪ್ರೇಮ್ ಕುಮಾರ್ ಕಾರ್ಯಕ್ರಮದಲ್ಲಿ ಮಾತನಾಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿ. ಯೋಗ ದೇಹ ಮತ್ತು ಮನಸ್ಸನ್ನು ಒಟ್ಟಿಗೆ ತರುತ್ತದೆ. ಚಲನೆ, ಉಸಿರಾಟ ಮತ್ತು ಧ್ಯಾನ ಈ ಮೂರು ಮುಖ್ಯಅಂಶಗಳ ಮೇಲೆ ನಿರ್ಮಿಸಲಾಗಿದೆ. ಯೋಗ ಸುಧಾರಿತ ಭಂಗಿ, ನಮ್ಯತೆ, ಶಕ್ತಿ, ಸಮತೋಲನ ಮತ್ತು ದೇಹದ ಅರಿವು ಸೇರಿದಂತೆ ಅನೇಕ ದೈಹಿಕ ಮತ್ತು ಮಾನಸಿಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ತಿಳಿಸಿದರು.

ಮಹಿಳಾ ಮಂಡಳಿ ಅಧ್ಯಕ್ಷೆ ಕಿರಣ ಬ್ರಹ್ಮದೇವ ಅಧ್ಯಕ್ಷತೆ ವಹಿಸಿದ್ದರು. ಮಂಡಳಿ ಕಾರ್ಯದರ್ಶಿ ಆಶಾಗುರು ಶೇಟ್, ಗೌರವಾಧ್ಯಕ್ಷರಾದ ಚಂಪಾರಾವ್, ನಿರ್ದೇಶಕರಾದ ಾತಿಮಾ ರೆಹಮಾನ್, ಸುಜಯ ಸದಾನಂದ, ಶೋಭಾ ದೇಸಾಯಿ, ಅಮಿತ ವಿನಾಯಕ, ಮೇನಕ ಹೆಬ್ಬಾರ್, ಜಾನಕಿ ಸುಂದರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net