ಶ್ರೀಮಠದಲ್ಲಿ ಸಿಬ್ಬಂದಿಗಳಿಂದ ಯೋಗಾಸನ

raichur
raichur
Published on

ರಾಯಚೂರು ಆಂಧ್ರಪ್ರದೇಶ ಸರ್ಕಾರವು ಹಾಗೂ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಸಹಯೋಗದೊಂದಿಗೆ ಯೋಗಂದ್ರ ಎಂಬ ಶೀರ್ಷಿಕೆಯಡಿ 11 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತ ಬುಧವಾರ ಶ್ರೀಮಠದ ರಾಜ ಬೀದಿಯಲ್ಲಿ ಶ್ರೀಮಠದ ಸಿಬ್ಬಂದಿಗಳು ಯೋಗಾಸನ ಮಾಡಿದರು.

ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ, ಭಾಗವಹಿಸಿದ ಎಲ್ಲರಿಗೂ ತಮ್ಮ ಅನುಗ್ರಹ ಸಂದೇಶವನ್ನು ನೀಡಿದರು. ಕಾರ್ಯಕ್ರಮದಲ್ಲಿ ಮಠದ ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ, ಭಕ್ತರು ಮತ್ತು ಶಿಷ್ಯರು ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಯೋಗಾಸನಗಳನ್ನು ಮಾಡುವ ಮೂಲಕ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಶ್ರೀಮಠದ ಎಎಒ ಎಲ್. ಮಾಧವ ಶೆಟ್ಟಿ , ಮ್ಯಾನೇಜರ್ ಎಸ್.ಕೆ. ಶ್ರೀನಿವಾಸ ರಾವ್ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net