

ಮಡಿಕೇರಿ:
ಪರಿಣಿತರ ಮಾರ್ಗದರ್ಶನದಲ್ಲಿ ನಿತ್ಯವೂ ಯೋಗಾಸನ ಮಾಡುವುದರಿಂದ ಮನಸ್ಸು ಮತ್ತು ದೇಹದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಕೊಡಗು ಆಯುಷ್ ಇಲಾಖೆಯ ಯೋಗ ಮತ್ರು ಪ್ರಕೃತಿ ಚಿಕಿತ್ಸೆ ವೈದ್ಯಾಧಿಕಾರಿ ಡಾ. ಪಿ.ಜಿ. ಅರುಣ್ ಹೇಳಿದರು.
ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಮಡಿಕೇರಿ ಸರ್ಕಾರಿ ಜೂನಿಯರ್ ಕಾಲೇಜು ವತಿಯಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಯೋಗದ ಮಹತ್ವಗಳ ಬಗ್ಗೆ ಮಾಹಿತಿ ನೀಡಿ, ಸರಳ ಯೋಗಾಸನಗಳನ್ನು ಹೇಳಿಕೊಟ್ಟ ನಂತರ ಮಾತನಾಡಿದರು.
ಯೋಗವು ದೇಹವನ್ನು ಮನಸ್ಸು ಮತ್ತು ಆತ್ಮಗಳೊಡನೆ ಬೆಸೆಯುವಲ್ಲಿ ಸಹಕರಿಸುತ್ತದೆ. ಕಳೆದ 11 ವರ್ಷಗಳ ಹಿಂದೆ ಆರಂಭವಾದ ಯೋಗ ದಿನಾಚರಣೆ ಈಗ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಯೋಗ ಭಾರತೀಯ ಸಂಸ್ಕೃತಿಯ ಹಿರಿಮೆ, ಗರಿಮೆಗಳ ಸಾಕಾರ ರೂಪವಾಗಿದೆ. ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿರುವ ಯೋಗವನ್ನು ನಿತ್ಯ ಜೀವನದಲ್ಲಿ ಅಳವಡಿಸಿ ಸಾತ್ವಿಕ ಮನಸ್ಸು ಬೆಳೆಸಿಕೊಳ್ಳಬೇಕು. ಯೋಗಾಭ್ಯಾಸ ಒತ್ತಡ ನಿವಾರಿಸುತ್ತದೆ. ಜೀವನದ ಅಂತಿಮ ಗುರಿಯಾದ ಆತ್ಮ ಸಾಕ್ಷಾತ್ಕಾರವನ್ನು ಸಿದ್ಧಿಸಿಕೊಳ್ಳಲು ನೆರವಾಗುತ್ತದೆ.
ಪರಿಣಿತರ ಮಾರ್ಗದರ್ಶನದಲ್ಲಿ ಸರಳ ಯೋಗಾಸನಗಳನ್ನು ಕಲಿತು ಪ್ರತಿದಿನವೂ ಅಭ್ಯಾಸ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳಿದೆ. ಯೋಗಸಾಧಕರನ್ನು ನೋಡಿದರೆ ಇದು ಗೊತ್ತಾಗುತ್ತದೆ. ಯೋಗದಿನಾಚರಣೆಯಂದು ವಿದ್ಯಾರ್ಥಿಗಳು ಕಲಿತಿರುವ ಆಸನಗಳನ್ನು ಮುಂದುವರಿಸಿಕೊAಡು ಹೋಗುವ ಮೂಲಕ ಯೋಗ ದಿನ ಆಚರಣೆಯ ಆಶಯಕ್ಕೆ ಸ್ಪಂದಿಸುವAತಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಪಿ.ಆರ್. ವಿಜಯ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ತಮ್ಮ ಭಾಷಣದಲ್ಲಿ ಅಂತಾರಾಷ್ಟಿçÃಯ ಯೋಗ ದಿನದ ಬಗ್ಗೆ ಪ್ರಸ್ತಾಪ ಮಾಡಿದ್ದರು. ಈ ಪ್ರಸ್ತಾವನೆಗೆ ವಿಶ್ವ ಸಂಸ್ಥೆಯ 177 ಸದಸ್ಯ ರಾಷ್ಟçಗಳು ಅನುಮೋದನೆ ನೀಡಿದ್ದವು. ಇದರ ಫಲವಾಗಿ 2015ರ ಜೂ. 21ರಂದು ಅಂತಾರಾಷ್ಟಿçÃಯ ಯೋಗ ದಿನವನ್ನು ಮೊದಲಿಗೆ ವಿಶ್ವಾದ್ಯಂತ ಆಚರಿಸಲಾಯಿತು. ಪ್ರತಿವರ್ಷವೂ ಒಂದು ವಿಶೇಷ ಪರಿಕಲ್ಪನೆಯೊಂದಿಗೆ ಯೋಗ ದಿನ ಆಚರಿಸಲಾಗುತ್ತದೆ. ಈ ವರ್ಷ 'ಒಂದು ಭೂಮಿ, ಒಂದು ಆರೋಗ್ಯ ಎನ್ನುವ ಘೋಷ ವಾಕ್ಯದೊಂದಿಗೆ ಜಗತ್ತಿನಾದ್ಯಂತ ಯೋಗ ದಿನ ಆಚರಿಸಲಾಗುತ್ತಿದೆ.
ಯೋಗ ನಮ್ಮ ಜೀವನ ಶೈಲಿಯ ಪ್ರಮುಖ ಭಾಗವಾಗಿದೆ. ಯೋಗದ ಬಗ್ಗೆ ಹೆಚ್ಚು ಹೆಚ್ಚು ಜನರಲ್ಲಿ ಜಾಗೃತಿ ಮೂಡಿಸÀಲು ಪ್ರತಿ ವರ್ಷ ಜೂ. 21ರಂದು ಅಂತಾರಾಷ್ಟಿçÃಯ ಯೋಗ ದಿನ ಎಂದು ಆಚರಿಸಲಾಗುತ್ತದೆ. ಯೋಗ ಭಾರತ ದೇಶವು ಜಗತ್ತಿಗೆ ನೀಡಿದ ಅದ್ಭುತ ಕೊಡುಗೆಯಾಗಿದೆ. ಇದು ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಕಲೆಯಾಗಿದೆ. ಪತಂಜಲಿ ಋಷಿಯ ಚಿಂತನೆಯ ಫಲವಾಗಿ ಯೋಗ ನಮಗೆ ಪರಿಚಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸ್ವತಃ ಯೋಗ ಪಟು ಆಗಿರುವುದರಿಂದ ಅವರು ಈ ವಯಸ್ಸಿನಲ್ಲೂ ಉತ್ಸಾಹದ ಚಿಲುಮೆ ಆಗಿದ್ದಾರೆ. ಯೋಗ ಶಿಕ್ಷಕರ ಆರೋಗ್ಯವನ್ನು ಗಮನಿಸಿದರೂ ಸಾಕು ಯೋಗದ ಶಕ್ತಿ ಆರಿವಾಗುತ್ತದೆ. ಜಗತ್ತಿನ ಎಲ್ಲೆಡೆ ಒಂದಲ್ಲ ಒಂದು ರೀತಿಯ ಪ್ರಕ್ಷÄಬ್ಧತೆ ಇದೆ. ಆದರೆ ಭಾರತದಲ್ಲಿ ಶಾಂತಿಯುತ ವಾತಾವರಣ ಇದೆ. ಇದಕ್ಕೆ ನಮ್ಮ, ಸಂಸ್ಕೃತಿ, ಪರಂಪರೆ ಕಾರಣ. ಯೋಗ ಕೂಡ ಅಂಥ ಶಕ್ತಿ ಹೊಂದಿದ್ದು, ಇದಕ್ಕೆ ದೇಶ, ಭಾಷೆ, ಧರ್ಮದ ಬೇಧ ಇಲ್ಲ ಎಂದು ಹೇಳಿದರು.
ಜಿಲ್ಲಾ ಆಯುಷ್ ಇಲಾಖೆ ಸಹಾಯಕ ಆಡಳಿತಾಧಿಕಾರಿ ಕಾವೇರಪ್ಪ, ಯೋಗ ಶಿಕ್ಷಕ ಸುಧಾಕರ್, ಉಪನ್ಯಾಸಕರಾದ ಕೆ.ಬಿ. ಗೌರಿ, ಮಧುಸೂದನ್, ಪಲ್ಲವಿ, ಅಭಿಲಾಷ್, ಕವಿತಾ, ಕೋಮಲಾ, ಗೌರಮ್ಮ, ಪೂರ್ಣಿಮಾ, ನವೀನ್‌ಕುಮಾರ್, ಸೌಮ್ಯಾವೇಗಸ್ ಇದ್ದರು.
ಅಂತಾರಾಷ್ಟಿçÃಯ ಯೋಗ ದಿನದ ಸಾಮಾನ್ಯ ಯೋಗ ಪ್ರೋಟೋಕಾಲ್ ಪ್ರಕಾರ ಕೊಡಗು ಆಯುಷ್ ಇಲಾಖೆಯ ಯೋಗ ಮತ್ರು ಪ್ರಕೃತಿ ಚಿಕಿತ್ಸೆ ವೈದ್ಯಾಧಿಕಾರಿ ಡಾ. ಪಿ.ಜಿ. ಅರುಣ್ ಆಸನಗಳು ಮತ್ತು ಪ್ರಾಣಯಾಮವನ್ನು ವಿವರಣೆಗಳೊಂದಿಗೆ ಹೇಳಿಕೊಟ್ಟರು. ಇವುಗಳನ್ನು ನಿಯಮಿತವಾಗಿ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾಲೇಜಿನ 400 ವಿದ್ಯಾರ್ಥಿಗಳು, ಉಪನ್ಯಾಸಕರು ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು. ವಿದ್ಯಾರ್ಥಿಗಳಿಗೆ ಅಗತ್ಯವಾಗಿ ಇರಬೇಕಾದ ಏಕಾಗ್ರತೆಯನ್ನು ಧ್ಯಾನ, ಓಂಕಾರದ ಮೂಲಕ ಸಾಧಿಸುವ ವಿಧಾನದ ಬಗ್ಗೆಯೂ ತಿಳುವಳಿಕೆ ನೀಡಿದರು.
ಪ್ರಾರ್ಥನೆಯೊಂದಿಗೆ ಆಸನಗಳ ಅಭ್ಯಾಸ ಆರಂಭಿಸಲಾಯಿತು. ಕುತ್ತಿಗೆ ವ್ಯಾಯಾಮ, ಕುತ್ತಿಗೆ ಚಲನೆ, ಭುಜದ ವ್ಯಾಯಾಮ, ಭುಜದ ಚಲನೆ, ಸೊಂಟದ ವ್ಯಾಯಾಮ, ಮೊಣಕಾಲು ವ್ಯಾಯಾಮ, ತಾಡಾಸನ, ವೃಕ್ಷಾಸನ, ಪಾದಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ, ಭದ್ರಾಸನ, ವಜ್ರಾಸನ, ಅರ್ಧ ಉಷ್ಟಾçಸನ, ಉಷ್ಟಾçಸನ, ಶಶಾಂಕಾಸನ, ಉತ್ಥಾನ ಮಂಡೂಕಾಸನ, ವಕ್ರಾಸನ, ಮಕರಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ತಾನ ಪಾದಾಸನ, ಅರ್ಧ ಹಲಾಸನ, ಪವನ ಮುಕ್ತಾಸನ, ಶವಾಸನ, ಕಪಲಭಾತಿ, ನಾಡಿಶೋಧನ ಪ್ರಾಣಯಾಮ, ಶೀತಲಿ ಪ್ರಾಣಯಾಮ, ಭ್ರಾಮರಿ ಪ್ರಾಣಯಾಮ ಹಾಗೂ ಧ್ಯಾನವನ್ನು ಸುಮಾರು 1 ಗಂಟೆ ಕಾಲ ಹೇಳಿಕೊಡಲಾಯಿತು.