

ಸಂಡೂರು: 20 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತ ಹೊಂದಿದ ಯೋಧ ವೆಂಕಟೇಶ್ ದಾಸರ್ ಅವರಿಗೆ ತಾಲೂಕಿನ ಭುಜಂಗನಗರದಲ್ಲಿ ಗ್ರಾಮಸ್ಥರು ಭಾನುವಾರ ಅದ್ದೂರಿಯಾಗಿ ಸ್ವಾಗತಿಸಿದರು.
ಗ್ರಾಮದ ಮುಖ್ಯ ಬೀದಿಯಲ್ಲಿ ಪೂರ್ಣ ಕುಂಭದ ಆರತಿ ಬೆಳಗಿ, ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡುವ ಮೂಲಕ ಯೋಧನಿಗೆ ಹೃದಯ ಸ್ಪರ್ಶಿ ಸ್ವಾಗತ ಕೋರಿದರು. ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ನಿವೃತ್ತ ಯೋಧ ವೆಂಕಟೇಶ್ ದಾಸರ್ ಮಾತನಾಡಿ, ನಾನು ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುವಾಗ ಸೇನೆಗೆ ಆಯ್ಕೆಯಾದೆ. ಮಹಾರಾಷ್ಟ್ರದ ನಾಗಪುರದಲ್ಲಿ ಪ್ರಥಮ ತರಬೇತಿಯೊಂದಿಗೆ ಯೋಧನ ಸೇವೆ ಆರಂಭಿಸಿದೆ. ಜಮ್ಮು, ಕಾಶ್ಮೀರ, ನೇಪಾಳ, ಪಾಕಿಸ್ತಾನದ, ಬಾಂಗ್ಲಾದೇಶ ಗಡಿಭಾಗಗಳಲ್ಲಿ ಸೇವೆ ಸಲ್ಲಿಸುವ ಭಾಗ್ಯ ದೊರೆಯಿತು ಎಂದು ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ:
ಗ್ರಾಪಂ ಅಧ್ಯಕ್ಷ ಬಿ.ಜಿ.ಪ್ರಕಾಶಗೌಡ ಮಾತನಾಡಿದರು. ಉಪಾಧ್ಯಕ್ಷೆ ಶಿವಮ್ಮ, ಬಿ.ಜಿ.ಉಜ್ಜನಗೌಡ, ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕ ಡಾ.ಮಲ್ಲಯ್ಯ, ಡಿಎಸ್‌ಎಸ್ ಸಂಚಾಲಕ ರಾಮಕೃಷ್ಣ ಹೆಗಡೆ, ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಶಿವಲಿಂಗಪ್ಪ, ಮಾದಿಗ ಸಮಾಜದ ಮುಖಂಡರಾದ ಐಹೊಳೆ ನಿಂಗಪ್ಪ, ಕಮ್ಮತ್ತೂರು ಮಲ್ಲೇಶಿ, ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳಿದ್ದರು.