ಯೋಚನೇಶ್ವರ ವಿರಕ್ತಮಠದ ಜಾತ್ರಾ ಮಹೋತ್ಸವ 10ರಿಂದ

Ratha logo
Published on

ಕುಂದಗೋಳ: ತಾಲೂಕಿನ ಕಮಡೊಳ್ಳಿ ಗ್ರಾಮದಲ್ಲಿ ಶ್ರೀ ಗುರು ಯೋಚನೇಶ್ವರ ವಿರಕ್ತಮಠದ ಜಾತ್ರಾ ಮಹೋತ್ಸವವು ಮೇ 10ರಿಂದ 13ರವರೆಗೆ ನಡೆಯಲಿದೆ.

ಇದಕ್ಕೂ ಮುನ್ನ ಲಿಂ. ಶ್ರೀ ಮ.ನಿ.ಪ್ರ. ರಾಚೋಟೇಶ್ವರ ಮಹಾಸ್ವಾಮಿಗಳ ದಿವ್ಯ ಪ್ರಕಾಶದಲ್ಲಿ ಮೇ 7ರಿಂದ 11ರವರೆಗೆ ಸಂಜೆ 7 ಗಂಟೆ ವರೆಗೆ ದುಮ್ಮವಾಡದ ಶ್ರೀ ಸರ್ಪಭೂಷಣ ದೇವರು ಅವರಿಂದ ಆಧ್ಯಾತ್ಮಿಕ ಪ್ರವಚನ ನಡೆಯಲಿದೆ.

10ರಂದು ಬೆಳಗ್ಗೆ 8ಕ್ಕೆ ಕಳಸದ ಮೆರವಣಿಗೆ, 11ರಂದು ಸಂಜೆ 5ರಿಂದ ಶ್ರೀ ಚೌಡೇಶ್ವರಿ ದೇವಿ ಮೇಣೆ ಉತ್ಸವ ಹಾಗೂ ಪ್ರವಚನ ಮಂಗಲ. 12ರಂದು ಬೆಳಗ್ಗೆ 6ಕ್ಕೆ ಶ್ರೀ ಗುರು ಲೋಚನೇಶ್ವರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ ಮತ್ತು ಬುತ್ತಿ ಪೂಜೆ, ಸಂಜೆ 5ಕ್ಕೆ ಮಹಾರಥೋತ್ಸವ, ಸಂಜೆ 7ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಮೇ 13ರಂದು ಸಂಜೆ 5ಕ್ಕೆ ಕಡುಬಿನ ಕಾಳಗ ನಡೆಯಲಿದೆ ಎಂದು ಶ್ರೀ ಗುರು ಲೋಚನೇಶ್ವರ ವಿರಕ್ತಮಠದ ಪಪೂ ಶ್ರೀ ಅಭಿನವ ರಾಚೋಟೇಶ್ವರ ದೇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net