ಪುರಾಣಿ ಪೋಡಿನ ಮೂಲ ಸಮಸ್ಯೆ ನಿವಾರಣೆಗೆ ಕ್ರಮ

10 yelandur 01
Published on

ಯಳಂದೂರು: ಪುರಾಣಿ ಪೋಡಿನಲ್ಲಿ ಅನೇಕ ಸಮಸ್ಯೆಗಳಿದ್ದು, ಅವುಗಳನ್ನು ನಿವಾರಿಸಲು ಕ್ರಮ ವಹಿಸಲಾಗುವುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದರು. ಅವರು ಬುಧವಾರ ಗುಂಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ , ಗ್ರಾಮ ಪಂಚಾಯಿತಿ ಮತ್ತು ಪುರಾಣಿ ಪೋಡಿಗೆ ಭೇಟಿ ನೀಡಿದ ಸಂದರ್ಭ ಮಹಿಳೆಯರಿಗೆ ದೊರಕುತ್ತಿರುವ ಸೌಲಭ್ಯಗಳ ಮಾಹಿತಿ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಹಿಳೆಯರ ದೂರು: ಆರೋಗ್ಯ ಇಲಾಖೆಯ ವತಿಯಿಂದ ನಮಗೆ ಯಾವುದೇ ತಪಾಸಣೆ ನಡೆಸುತ್ತಿಲ್ಲ. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೂಲಿ ಕೆಲಸವನ್ನು ನೀಡುತ್ತಿಲ್ಲ. ಜಾಬ್ ಕಾರ್ಡ್ ಮಾಡಿಸಿದ್ದರೂ ನಮಗೆ ಕೆಲಸವಿಲ್ಲ. ನಾವು ಮಳೆ ನಂಬಿ ಬದುಕುವ ಜನರಾಗಿದ್ದೇವೆ. ನಮ್ಮಲ್ಲಿ ಕೃಷಿ ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದಾರೆ. ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಪುರಾಣಿ ಪೋಡಿನ ಮಹಿಳೆಯರು ನಾಗಲಕ್ಷ್ಮೀ ಚೌಧರಿ ಅವರಿಗೆ ಸಂಕಷ್ಟಗಳನ್ನು ಹೇಳಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net