ಬಿಳಿಗಿರಿರಂಗನಬೆಟ್ಟದಲ್ಲಿ ಮಳೆ

Oplus_131072
Oplus_131072
Published on

ಯಳಂದೂರು:ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಬುಧವಾರ ಸಂಜೆ 5 ಗಂಟೆ ವೇಳೆಯಲ್ಲಿ ಮಳೆ ಸುರಿಯಿತು.

ತಾಲೂಕಿನ ಬಿಳಿಗಿರಿರಂಗನಬೆಟ್ಟದ ತಪ್ಪಲಿನಲ್ಲಿರುವ ಕೆ. ದೇವರಹಳ್ಳಿ, ಮುರುಟಿ ಪಾಳ್ಯ ಬೆಲ್ಲವತ್ತ, ಗುಂಬಳ್ಳಿ ಚೆಕ್‌ಪೋಸ್ಟ್, ಪುರಾಣಿಪೋಡು, ಯರಕನಗದ್ದೆ, ಕನ್ನೇರಿ ಕಾಲೋನಿ, ಬಂಗ್ಲೆಪೋಡು, ಬಿಳಿಗಿರಿರಂಗನಾಥಸ್ವಾಮಿ ದೇಗುಲ ಸೇರಿದಂತೆ ಅನೇಕ ಕಡೆ ಮಳೆಯಾಗಿದೆ. ಇದರಿಂದ ಬೆಟ್ಟದಲ್ಲಿ ತಂಪು ವಾತಾವರಣ ನಿರ್ಮಾಣಗೊಂಡಿದೆ. ಅಲ್ಲದೆ ಬೆಟ್ಟಕ್ಕೆ ಬಂದಿದ್ದ ಪ್ರವಾಸಿಗರಿಗೂ ಈ ವರ್ಷದ ಮಳೆಯ ಸಿಂಚನದಿಂದ ಪುಳಕಿತಗೊಂಡಿದ್ದಾರೆ. ಹಲವು ದಿನಗಳಿಂದ ಬಿಸಿಲಿನ ಬೇಗೆಗೆ ಬಿಳಿಗಿರಿರಂಗನಬೆಟ್ಟದಲ್ಲೂ ತಾಪಮಾನದಲ್ಲಿ ಏರಿಕೆ ಕಂಡು ಬಂದಿತು. ಈ ವರ್ಷ ಮಾರ್ಚ್‌ನಲ್ಲೇ ಮಳೆ ಬಂದಿದೆ. ಈಗ ಕೇವಲ ಮಳೆಯ ಸಿಂಚನವಾಗಿದೆ. ಜೋರಾಗಿ ಮಳೆಯಾದಲ್ಲಿ, ಇಲ್ಲಿನ ಕೆರೆಕಟ್ಟೆಗಳು ತುಂಬುತ್ತವೆ. ಕಾಡಿಗೆ ಜೀವ ಕಳೆ ಬರುತ್ತದೆ. ಕಾಡು ಪ್ರಾಣಿಗಳಿಗೂ ಸಮೃದ್ಧ ಮೇವು ಹಾಗೂ ನೀರು ಲಭಿಸುತ್ತದೆ. ಇನ್ನಷ್ಟು ಮಳೆ ಬಿದ್ದು ಎಲೆ ಉದುರಿರುವ ಕಾಡು ಬೇಗ ಚಿಗುರಲಿದೆ ಎಂದು ಇಲ್ಲಿನ ವಾಸಿಗಳು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net