

ಕಿಕ್ಕೇರಿ : ಹೋಬಳಿಯ ಗಡಿಭಾಗದ ಆನೆಗೊಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಸದಸ್ಯೆ ವೈ.ಎಲ್.ರುಕ್ಮಿಣಿ ನಾರಾಯಣ್ ಅವಿರೋಧವಾಗಿ ಆಯ್ಕೆಯಾದರು.
ಎಲ್.ಪಿ.ಮಹಾಲಕ್ಷಿ ವಿಶ್ವನಾಥ್ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ವೈ.ಎಲ್.ರುಕ್ಮಿಣಿ ನಾರಾಯಣ್ ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಚುನಾಯಿತರಾದರು. 17 ಸದಸ್ಯರ ಬಲದಲ್ಲಿ ಅನುಸೂಯ, ಬಿ.ಎಚ್.ಕುಮಾರಿ, ಪಿ.ರಕ್ಷಿತ್ ಗೈರಾಗಿದ್ದರು.
ಚುನಾವಣಾಧಿಕಾರಿಯಾಗಿ ಕೃಷಿ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಸಂತೋಷ ಕುಮಾರ್, ಸಹ ಚುನಾವಣಾಧಿಕಾರಿಯಾಗಿ ತಾಲೂಕು ಪಂಚಾಯಿತಿ ವ್ಯವಸ್ಥಾಪಕ ಅನಿಲ್‌ಬಾಬು, ಪಿಡಿಒ ರವಿಕುಮಾರ್, ಕಾರ್ಯದರ್ಶಿ ನವೀನ್‌ಕುಮಾರ್ ಕರ್ತವ್ಯ ನಿರ್ವಹಿಸಿದರು.
ನೂತನ ಅಧ್ಯಕ್ಷರಿಗೆ ಅಭಿಮಾನಿಗಳು, ಕಾರ್ಯಕರ್ತರು ಸಿಹಿ ತಿನಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಜೆಡಿಎಸ್ ಮುಖಂಡರಾದ ಸಿ.ಎನ್.ಪುಟ್ಟಸ್ವಾಮಿಗೌಡ, ಐಕನಹಳ್ಳಿ ಕೃಷ್ಣೇಗೌಡ, ಬಿ.ಎಸ್.ಮಂಜುನಾಥ್, ಕೋಳಿ ವೆಂಕಟೇಶ್, ದಾನಶೇಖರ್, ಶಿಶುಪಾಲ, ರಾಮಕೃಷ್ಣೇಗೌಡ, ನಂಜುಂಡೇಗೌಡ, ಐನೋರಹಳ್ಳಿ ಮಲ್ಲೇಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಂಜೇಶ್, ಸದಸ್ಯರಾದ ಕಡಹೆಮ್ಮಿಗೆ ರಮೇಶ್, ಭಾಗ್ಯಮ್ಮ ಶಿಶುಪಾಲ್, ಎಲ್.ಪಿ.ಮಹಾಲಕ್ಷಿ ವಿಶ್ವನಾಥ್, ಬಿ.ಎನ್.ಯೋಗೇಶ್, ಪಿ. ಪ್ರಕಾಶ, ಸಿ.ಆರ್.ಗಂಗಾಧರ್, ಮಂಜಶೆಟ್ಟಿ, ಧನಲಕ್ಷ್ಮೀ ಮಂಜೇಗೌಡ, ವೈ.ಎಲ್.ರುಕ್ಮಿಣಿ ನಾರಾಯಣ್, ನಾಗಮ್ಮ ಮಂಜೇಗೌಡ, ಲಕ್ಷ್ಮೀ ರಮೇಶಬಾಬು, ರಂಜಿತಾ ಸುರೇಶ್ ಉಪಸ್ಥಿತರಿದ್ದರು.