ಕಾರು ಡಿಕ್ಕಿ ಸ್ಕೂಟರ್ ಸವಾರ ಮೃತ್ಯು

accident-15
Published on

ಮಂಗಳೂರು: ನಗರದ ಯೆಯ್ಯಡಿ ಜಂಕ್ಷನ್‌ನಲ್ಲಿ ಕಾರು ಢಿಕ್ಕಿಯಾಗಿ ಸ್ಕೂಟರ್ ಸವಾರ ಮೃತಪಟ್ಟಿದ್ದಾರೆ.


ಸೋಮಲಿಂಗ (17) ಮೃತಪಟ್ಟವರು. ಅವರು ಸೋಮವಾರ ರಾತ್ರಿ 12 ಗಂಟೆಗೆ ಚೇತನ್ ನಾಯ್ಕ ಅವರನ್ನು ಸ್ಕೂಟರ್‌ನಲ್ಲಿ ಕುಳ್ಳಿರಿಸಿಕೊಂಡು ಬಾರೆಬೈಲ್ ಕಡೆಯಿಂದ ಯೆಯ್ಯಡಿ ಜಂಕ್ಷನ್ ಕಡೆಗೆ ಬಂದು ಕಾವೂರು ಕಡೆಗೆ ಹೋಗುತ್ತಿದ್ದಾಗ ಕೆಪಿಟಿ ಕಡೆಯಿಂದ ಮೇರಿಹಿಲ್ ಕಡೆಗೆ ಹೋಗುತ್ತಿದ್ದ ಆಮ್ನಿ ಕಾರು ಢಿಕ್ಕಿ ಹೊಡೆಯಿತು. ಪರಿಣಾಮವಾಗಿ ಸೋಮಲಿಂಗ ಅವರು ಕಾರಿನ ಗಾಜಿನ ಮೇಲೆ ಎಸೆಯಲ್ಪಟ್ಟು ಡಿವೈಡರ್ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡರು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮುಂಜಾವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅಪಘಾತಕ್ಕೆ ಕಾರಣನಾದ ಕಾರು ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ. ಮಂಗಳೂರು ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net