

ಶ್ರೀನಿವಾಸಪುರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಭಾಗಕ್ಕೆ ಎತ್ತಿನಹೊಳೆ ನೀರು 6 ತಿಂಗಳ ಒಳಗೆ ಹಾಗೂ ಕೆ.ಸಿ.ವ್ಯಾಲಿ ನೀರು ಡಿಸೆಂಬರ್ ಅಂತ್ಯಕ್ಕೆ ಜಿಲ್ಲೆಯ 6 ತಾಲೂಕು ಸೇರಿ ಚಿಂತಾಮಣಿಯ ಕೆಲ ಕೆರೆಗಳಿಗೆ ಹರಿಯಲಿದೆ ಎಂದು ಮಾಜಿ ಸ್ಪೀಕರ್ ರಮೇಶ್‌ಕುವಾರ್ ತಿಳಿಸಿದರು.
ತಾಲೂಕಿನ ಶ್ಯಾಗತ್ತೂರು ಹಾಲು ಉತ್ಪಾದಕರ ಸಹಕಾರ ಸಂದ 1ನೇ ಅಂತಸ್ತು ಕಟ್ಟಡವನ್ನು ಶುಕ್ರವಾರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಎತ್ತಿನಹೊಳೆ ಕಾಮಗಾರಿ ಶೇ.80 ಪೂರ್ಣಗೊಂಡಿದ್ದು, 6 ತಿಂಗಳ ಒಳಗೆ ಪೈಪ್‌ಲೈನ್ ಮತ್ತು ಕಾಲುವೆಗಳ ನೀರು ಮೂಲಕ ಹರಿಸಬೇಕು ಎಂದು ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಲಾಗಿದ್ದು, ಸಿಎಂ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದರು.
ಎತ್ತಿನಹೊಳೆ ಕಾಮಗಾರಿ 2013ರ ಕಾಂಗ್ರೆಸ್ ಸರ್ಕಾರದಲ್ಲಿ ಭರದಿಂದ ಸಾಗಿತ್ತು. ನಂತರ ಬಂದ ಸಮ್ಮಿಶ್ರ ಸರ್ಕಾರ ಮತ್ತು ಬಿಜೆಪಿ ಸರ್ಕಾರದಲ್ಲಿ ಹಿನ್ನಡೆಯಾಯಿತು. ಕೋಲಾರ-ಚಿಕ್ಕಬಳ್ಳಾಪುರ ಭಾಗಕ್ಕೆ ಸಿಗಬೇಕಾಗಿದ್ದ ನೀರು ಈಗ ಲಭ್ಯವಿದೆ. ಕೊರಟಗೆರೆ ಮತ್ತು ದೊಡ್ಡಬಳ್ಳಾಪುರ ಬಳಿ 4,000 ಎಕೆರೆಯಲ್ಲಿ ನೀರನ್ನು ಸ್ಟೋರೇಜ್ ಮಾಡಬೇಕಾಗಿದ್ದ ಜಾಗದಲ್ಲಿ ಜಮೀನು ಇತ್ಯರ್ಥವಾಗದ ಕಾರಣ ಕಾಮಗಾರಿಗೆ ಹಿನ್ನಡೆಯಾಗಿದೆ. ಗುತ್ತಿಗೆದಾರರಿಗೆ ಹಣ ಬಿಡುಗಡೆಯಾದರೆ ಕಾಮಗಾರಿ ಪೂರ್ಣಗೊಳ್ಳುತ್ತವೆ ಎಂದು ತಿಳಿಸಿದರು.
ಕೆ.ಸಿ.ವ್ಯಾಲಿಯ 2ನೇ ಹಂತದ ಯೋಜನೆಯಿಂದ ನಮಗೆ ಬರಬೇಕಾಗಿದ್ದ 440 ಎಂಎಲ್‌ಡಿ ನೀರು ಹರಿದರೆ ಜಿಲ್ಲೆಯ 6 ತಾಲೂಕುಗಳ ಎಲ್ಲ ಕೆರೆ, ಕುಂಟೆಗಳು ಭರ್ತಿಯಾಗುತ್ತವೆ. ಮಳೆ ಇಲ್ಲದಿದ್ದರೂ ಕೆರೆಗಳಲ್ಲಿ ನೀರು ಇರುತ್ತವೆ. ಅಂರ್ತಜಲ ವೃದ್ಧಿಯಾಗುತ್ತದೆ ಎಂದರು.
ನಿರ್ದೇಶಕ ಎನ್.ಹನುಮೇಶ್ ಮಾತನಾಡಿ, ಸಹಕಾರ ಸಂಗಳಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಬಾರದು. ಶ್ರೀನಿವಾಸಪುರ ತಾಲೂಕಿನಿಂದ ನಿತ್ಯ 80 ಸಾವಿರ ಲೀ.ಹಾಲು ಸರಬರಾಜು ಆಗುತ್ತಿದೆ. ಇದನ್ನು ಒಂದು ಲಕ್ಷಕ್ಕೆ ಏರಿಕೆ ಮಾಡುತ್ತೇವೆ. ಹಾಲು ಉತ್ಪಾದಕರಿಗೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.
ಶ್ಯಾಗತ್ತೂರು ಹಾಲು ಉತ್ಪಾದಕರ ಸಹಕಾರ ಸಂದ ಅಧ್ಯಕ್ಷ ಎಸ್.ವಿ.ಸುಧಾಕರ್ ಮಾತನಾಡಿ, ಗ್ರಾಮದಲ್ಲಿ ಚಿಕ್ಕ ಕೊಠಡಿಯಲ್ಲಿ ಹಾಲು ಸಹಕಾರ ಸಂ ಪ್ರಾರಂಭಿಸಿ ಈಗ ಪ್ರತಿದಿನ 9 ಕ್ಯಾನ್ ಹಾಲನ್ನು ಒಕ್ಕೂಟಕ್ಕೆ ನೀಡುತ್ತಿದ್ದೇವೆ. ಇದನ್ನು 12 ಕ್ಯಾನ್‌ಗೆ ಏರಿಕೆ ವಾಡುತ್ತೇವೆ. ಕೆ.ಸಿ.ವ್ಯಾಲಿ ಯೋಜನೆಯಿಂದ ಹಾಲು ಉತ್ಪಾದಕರ ಸಂಖ್ಯೆ ಹೆಚ್ಚಾಗಿದೆ. ಹಾಲಿನ ಪ್ರವಾಣ ದಿನೇ ದಿನೇ ಹೆಚ್ಚಾಗುತ್ತಿದೆ ಎಂದರು.
ನೀರು ಹರಿಸುವುದೇ ಉದ್ದೇಶ: ಹೈನುಗಾರಿಕೆ, ರೇಷ್ಮೆ, ಕುರಿ ಸಾಕಣೆ ಜತೆಗೆ ನೀರಿನ ಪ್ರವಾಣ ಹೆಚ್ಚಾದರೆ ಮೀನುಗಾರಿಕೆ ವಾಡಬಹುದು. ವ್ಯವಸಾಯಕ್ಕೆ ಜಾತಿ, ಕುಲ ಇಲ್ಲ. ರೈತರ ಮಕ್ಕಳು ವಲಸೆ ಹೋಗುವ ಅಗತ್ಯವಿಲ್ಲ. ಪಟ್ಟಣ ಸೇರಿ ಹೋಟೆಲ್‌ಗಳಲ್ಲಿ ಪ್ಲೇಟ್ ತೊಳೆಯುವುದು, ಕಾರ್ಖಾನೆಗಳ ಬಳಿ ಕಾವಲು ಕಾಯುವುದು ತಪ್ಪುತ್ತದೆ. ನೀರಾವರಿ ಇದ್ದರೆ ರೈತರೇ ಉದ್ಯೋಗ ಸೃಷ್ಟಿ ವಾಡಿಕೊಂಡು ಸ್ವಂತ ಉದ್ಯೋಗದಿಂದ ಬದುಕಬಹುದು ಎಂದು ಕೆ.ಆರ್.ರಮೇಶ್‌ಕುಮಾರ್ ತಿಳಿಸಿದರು.
200 ಅಡಿಗೆ ನೀರು ಲಭ್ಯ: ಕೆ.ಸಿ.ವ್ಯಾಲಿ ನೀರಿನಿಂದ ಅಂತರ್ಜಲ ಹೆಚ್ಚಾಗಿದೆ. ಹಿಂದೆ ಪಂಪು ಮೋಟಾರ್ ಸುಟ್ಟು ಹೋಗುತ್ತಿತ್ತು. ಈಗ 2 ವರ್ಷಗಳಿಂದ ಕೊಳವೆ ಬಾವಿಗಳಲ್ಲಿ 200 ಅಡಿಗೆ ನೀರು ಸಿಗುತ್ತಿದೆ. ರೈತರ ಕಷ್ಟ ನಿವಾರಣೆಯಾಗಿದೆ. ರಮೇಶ್‌ಕುವಾರ್ ಅವರನ್ನು ಸೋಲಿಸಿ ಎತ್ತಿನಹೊಳೆ ನೀರು ನಮಗೆ ಸಿಗದಂತೆ ನಾವೇ ವಾಡಿಕೊಂಡಿದ್ದೇವೆ. ಈಗ ಅರಿವಾಗುತ್ತಿದೆ ಎಂದು ಕೋಮುಲ್ ನಿರ್ದೇಶಕ ಕೆ.ಕೆ.ಮಂಜುನಾಥ್ ತಿಳಿಸಿದರು.
ಶ್ರೀನಿವಾಸಪುರ ತಾಲೂಕಿನಿಂದ ಸರಬರಾಜು ಆಗುತ್ತಿರುವ ಹಾಲಿನ ಗುಣಮಟ್ಟ ಜಿಲ್ಲೆಯಲ್ಲಿ ನಂ.1 ಸ್ಥಾನದಲ್ಲಿದೆ. ಇದಕ್ಕಾಗಿ ಪ್ರಶಸ್ತಿಪಡೆಯುತ್ತಿದ್ದೇವೆ. ಸಹಕಾರ ಸಂಗಳ ಸಂಖ್ಯೆ 2 ವರ್ಷಗಳಿಂದ 50ಕ್ಕೆ ಏರಿಕೆ ವಾಡಲಾಗಿದೆ. ಕೆ.ಸಿ.ವ್ಯಾಲಿ ನೀರು ಜಿಲ್ಲೆಗೆ ಬಂದ ನಂತರ ಶ್ರೀನಿವಾಸಪುರ ಮತ್ತು ಕೋಲಾರ ತಾಲೂಕಿನಲ್ಲಿ ಹಾಲು ಉತ್ಪಾದನೆ ಹೆಚ್ಚಾಗಿದೆ. ಜಿಲ್ಲೆಯಲ್ಲೀಗ 7.5 ಲಕ್ಷ ಲೀ.ಹಾಲು ಉತ್ಪಾದನೆಯಾಗುತ್ತಿದೆ. ಮುನಿರಾಜು ಶಿಬಿರ ಕಚೇರಿ ಉಪವ್ಯವಸ್ಥಾಪಕ