ನಿನ್ನೆ ನಾವೇ ಇಲ್ಲ ಅಂದ್ರೆ ಸಿಟಿ ಖಾಲಿ ಆಗುತ್ತೆ ಎಂದು.. ಇಂದು I Love U Bengaluru ಎಂದು ಯೂಟರ್ನ್​ ಹೊಡೆದ ಉತ್ತರ ಭಾರತದ ಯುವತಿ

north woman
Published on

 ಬೆಂಗಳೂರು: ಉತ್ತರ ಭಾರತದ ಮಹಿಳೆಯೊಬ್ಬಳು ನಾವಿಲ್ಲ ಅಂದರೆ ಬೆಂಗಳೂರು ಖಾಲಿ ಖಾಲಿ ಎಂದು ಲೇವಡಿ ಮಾಡಿ ಮಾತನಾಡಿದ್ದಳು. ಈ ವೀಡಿಯೋ ವೈರಲ್​​ ಆಗುತ್ತಿದ್ದಂತೆ ನೆಟ್ಟಿಗರು ಬಿಸಿಮುಟ್ಟಿಸುತ್ತಿದ್ದಾರೆ. ʻತೊಲಗ್ರೋ ಮೊದಲುʼಎಂದು ಅಭಿಯಾನ ಕೂಡ ಶುರುವಾಗಿತ್ತು. ಇದೆಲ್ಲ ಬೆಳವಣಿಗೆ ಬೆನ್ನಲ್ಲೇ ಮಹಿಳೆ ಸೋಶಿಯಲ್​​ ಮೀಡಿಯಾದಲ್ಲಿ ನಾನು ಬೆಂಗಳೂರನ್ನು ಪ್ರೀತಿಸುತ್ತೇನೆ ಎನ್ನುವ ವಿಡಿಯೋ ಹಂಚಿಕೊಳ್ಳುವ ಮೂಲಕವಾಗಿ ಯೂಟರ್ನ್​  ಹೊಡೆದಿದ್ದಾಳೆ.

ಮಹಿಳೆಯೊಬ್ಬಳು ವಿಡಿಯೋದಲ್ಲಿ ನಾವೆಲ್ಲ ನಾರ್ಥಿಗಳು ಬೆಂಗಳೂರು ಬಿಟ್ಟರೆ, ಎಲ್ಲ ನಗರದ ಪಿಜಿಗಳು ಖಾಲಿ ಖಾಲಿಯಾಗಿರುತ್ತದೆ. ಕೋರಮಂಗಲದ ಪಬ್‌ಗಳು ಬಿಕೋ ಎನ್ನುತ್ತಿರುತ್ತೆ ಎಂದು ವಿಡಿಯೋ ಮಾಡಿದ್ದಾಳೆ. ಅಂದರೆ ನಾರ್ಥ್‌ ಇಂಡಿಯನ್‌ಗಳಿಂದ ಮಾತ್ರ ಬೆಂಗಳೂರು ಉದ್ದಾರ ಆಗಿದೆ ಎಂಬ ಭ್ರಮೆಯಲ್ಲಿರುವುದು ಇಲ್ಲಿ ಸ್ಪಷ್ಟವಾಗಿದೆ. ಇನ್ನೂ ಈ ವಿಡಿಯೊಗೆ ಸಾರ್ವಜನಿಕರು ಮಾತ್ರವಲ್ಲದೆ ಸೆಲೆಬ್ರಿಟಿಗಳಿಂದ ಕೂಡ ಆಕ್ರೋಶ ವ್ಯಕ್ತವಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್​​ ಆಗುತ್ತಿದ್ದಂತೆ, ಕೆಲವು ಆಕ್ರೋಶ ಹೊರ ಹಾಕುತ್ತಿದ್ದರು. ಕೆಟ್ಟ ಮೇಲೆ ಬುದ್ಧಿ ಬಂತು ಅನ್ನೋ ಹಾಗೆ ಸುಗಂಧ್​ ಶರ್ಮಾಗೆ  ನಿನ್ನೆ ಕನ್ನಡ ಮತ್ತು ಕನ್ನಡಿಗರ ವಿಚಾರದಲ್ಲಿ ಬೆಂಗಳೂರು ಖಾಲಿ ಆಗುತ್ತೆ ಅಂದೋಳು ಇವತ್ತು ಐ ಲವ್​ ಬೆಂಗಳೂರು ಎಂದು ಹೇಳುವ ಮೂಲಕ ಯೂಟರ್ನ್​ ಹೊಡೆದಿದ್ದಾಳೆ.

ಮತ್ತೊಂದು ವಿಡಿಯೋ ಹಂಚಿಕೊಂಡ ಸುಗಂಧ್​​ ಶರ್ಮಾ, ನಾನು ಟ್ರಾವೆಲರ್ ನಾನು ಊರೂರು ಸುತ್ತುತ್ತೇನೆ. ನನಗೆ ಬೆಂಗಳೂರು ಅಂದ್ರೆ ತುಂಬಾ ಇಷ್ಟ, ಬೆಂಗಳೂರಿನ ಬಗ್ಗೆ ಗೌರವ ಇದೆ. ನಾರ್ತ್, ಇಸ್ಟ್ ಸೌತ್ ಈ ತರಹ ಬೇಧ ಭಾವ ಇಲ್ಲ ನಾವೆಲ್ಲಾ ಭಾರತೀಯರು ಅಂತ ವಿಡಿಯೋ ಹಂಚಿಕೊಂಡಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net