ಮಾರ್ಚ್ 30ರಂದು ಯೇನೆಪೋಯ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ

mng mar 28- Yenepoya release
ಕೂಳೂರು ದಿ ಯೇನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್ ನಲ್ಲಿ ‘ಪಿಯು ಬಳಿಕ ಏನು?’ ಕುರಿತು ನಡೆಯಲಿರುವ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದ ಭಿತ್ತಿಪತ್ರವನ್ನು ಸಂಸ್ಥೆಯ ಡೀನ್ ಮತ್ತು ಪ್ರಾಂಶುಪಾಲ ಡಾ.ಅರುಣ್ ಭಾಗವತ್ ಬಿಡುಗಡೆ ಮಾಡಿದರು. ಕಾರ್ಯಕ್ರಮ ಸಂಯೋಜಕಿ ದೀಪಾಲಿ ಶೆಣೈ, ವಿಭಾಗ ಮುಖ್ಯಸ್ಥೆ ಶಕೀನಾ, ಸಾಕ್ಷಾ ಶೆಟ್ಟಿ, ಭರತ್ ಎನ್.ಕೆ. ಉಪಸ್ಥಿತರಿದ್ದರು.
Published on

ಮಂಗಳೂರು: ನಗರದ ಕೂಳೂರು ದಿ ಯೇನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್ ವತಿಯಿಂದ ‘ಪಿಯು ಬಳಿಕ ಏನು?’ ಎಂಬ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಮಾ.30ರಂದು ಬೆಳಗ್ಗೆ 10 ರಿಂದ ಕೂಳೂರಿನಲ್ಲಿರುವ ಸಂಸ್ಥೆಯ ಕ್ಯಾಂಪಸ್‌ನಲ್ಲಿ ನಡೆಯಲಿದೆ.ಪ್ರಸಕ್ತ ಸನ್ನಿವೇಶದಲ್ಲಿ ಮಾರುಕಟ್ಟೆ, ಉದ್ಯಮ ಸಹಿತ ವಿವಿಧಕ್ಷೇತ್ರಗಳಲ್ಲಿ ಇರುವ ಬೇಡಿಕೆ ಅತ್ಯುತ್ತಮ ವಿಷಯ, ಹೊಸ ತಲೆಮಾರಿನ ವಿವಿಧ ಕೋರ್ಸ್‌ಗಳು. ದೇಶವಿದೇಶಗಳಲ್ಲಿ ಅಧಿಕ ಬೇಡಿಕೆ ಇರುವ ಕೋರ್ಸುಗಳು ಮುಂತಾದ ವಿಷಯಗಳಲ್ಲಿ ಕಾರ್ಯಕ್ರಮದಲ್ಲಿ ಅರ್ಹ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ- ಮಾರ್ಗದರ್ಶನ ದೊರೆಯಲಿದೆ ಎಂದು ಸಂಸ್ಥೆಯ ಡೀನ್ ಮತ್ತು ಪ್ರಾಂಶುಪಾಲ ಡಾ.ಅರುಣ್ ಭಾಗವತ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ದಕ ಪದವಿಪೂರ್ವ ಪ್ರಿನ್ಸಿಪಾಲರ ಸಂಸ್ಥೆಯ ಮಾಜಿ ಅಧ್ಯಕ್ಷ ಕೆ.ಯನ್.ಗಂಗಾಧರ್ ಆಳ್ವ ಮತ್ತು ತೃಷಾ ವಿದ್ಯಾ ಪಿಯು ಕಾಲೇಜಿನ ಪ್ರಾಂಶುಪಾಲ ಡಾ.ಅನಂತ್ ಪೈ ಮುಖ್ಯ ಅತಿಥಿಯಾಗಿರುವರು ಎಂದರು.ಕಾರ್ಯಕ್ರಮ ಸಂಯೋಜಕಿ ದೀಪಾಲಿ ಶೆಣೈ, ವಿಭಾಗ ಮುಖ್ಯಸ್ಥೆ ಶಕೀನಾ, ಸಾಕ್ಷಾ ಶೆಟ್ಟಿ, ಭರತ್ ಎನ್.ಕೆ.ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net