ಸೇತುವೆ ಕಾಮಗಾರಿ ಶೀಘ್ರ ಪೂರ್ಣ: ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಹೇಳಿಕೆ

171221 Jaditata Construction of the ditch bridge
ಕಂಪ್ಲಿ ತಾಲೂಕು ಎಮ್ಮಿಗನೂರು ಗ್ರಾಮದ ಜಡಿತಾತನ ಹಳ್ಳದ ಸೇತುವೆ ನಿರ್ಮಾಣಕ್ಕೆ ಶಾಸಕ ಜೆ.ಎನ್.ಗಣೇಶ್ ಚಾಲನೆ ನೀಡಿದರು.
Published on

ಕಂಪ್ಲಿ: ರೈತರ ಬಹುವರ್ಷಗಳ ಬೇಡಿಕೆಯಾದ ಎಮ್ಮಿಗನೂರಿನ ಜಡಿತಾತನ ಹಳ್ಳದ ಸೇತುವೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.

ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಶುಕ್ರವಾರ ಜಿಪಂ ಅನುದಾನದಡಿ 2 ಕೋಟಿ ರೂ. ವೆಚ್ಚದಲ್ಲಿ ಹಳ್ಳಕ್ಕೆ ಸೇತುವೆ ನಿರ್ಮಾಣ, ಮೀನಿನಕೆರೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಗ್ರಾಪಂ ಮಾಜಿ ಸದಸ್ಯ ಹೆಬ್ಬಟ್ಟದ ರಾಮಾಂಜನಿ ಮಾತನಾಡಿ, ಜಡಿತಾತನ ಹಳ್ಳದಿಂದ ಒಂದು ಕಿಮೀ ಅಂತರದ ಹೊಲಗದ್ದೆಗಳಿಗೆ ತೆರಳಲು ರೈತರು ಗುತ್ತಿಗನೂರು ಮೂಲಕ 11 ಕಿಮೀ ಸುತ್ತಿ ಕ್ರಮಿಸಬೇಕಿತ್ತು. ಸೇತುವೆಯಿಂದಾಗಿ ರೈತರಿಗೆ ತುಂಬ ಅನುಕೂಲವಾಗಲಿದೆ ಎಂದರು.

ಡಿಎಂಎಫ್ ಅನುದಾನದ 77 ಲಕ್ಷ ರೂ.ವೆಚ್ಚದಲ್ಲಿ ನಂ.10ಮುದ್ದಾಪುರ, ಕೊಂಡಯ್ಯಕ್ಯಾಂಪ್, ಮೆಟ್ರಿ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ, ಕುಡಿವ ನೀರಿನ ಘಟಕ ಕಾಮಗಾರಿಗಳಿಗೆ ಚಾಲನೆ ನೀಡಿದರು. ಪ್ರಮುಖರಾದ ಬಿ.ಸದಾಶಿವಪ್ಪ, ಹಾದಿಮನಿ ಶ್ರೀಧರ, ಟಿ.ವೆಂಕಟರಾಜು, ಎಂ.ಸುಧೀರ್, ಜೆ.ಶ್ರೀನಿವಾಸಗೌಡ, ಪಿಡಿಒ ಶೇಷಗಿರಿ, ಎಲ್.ಶ್ರೀನಿವಾಸ್, ಎಲ್.ಕೇಶವನಾಯ್ಡು, ಅಂಥೋನಿ, ಸಂಧ್ಯಾರಾಣಿ, ಕೃಷ್ಟಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net