

ರಾಚಯ್ಯ ಸ್ವಾಮಿ ಮಾಚನೂರು
ರಾಯಚೂರು ಜಿಲ್ಲೆಯ ಎಡ ಮತ್ತು ಬಲ ಪ್ರದೇಶಕಡೆ ಕೃಷ್ಣಾ ,ತುಂಗಾಭದ್ರ ನದಿಗಳು ಹರಿಯುತ್ತಿದ್ದರೂ ನಗರದಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಕಳೆದ ಒಂದು ತಿಂಗಳಿAದ ಮೂರು ದಿನಕ್ಕೊಮ್ಮೆ ನಗರಕ್ಕೆ ನೀರು ಬಿಡಲಾಗುತ್ತಿರುವುದರಿಂದ ಹಾಹಾಕಾರ ಶುರುವಾಗಿದೆ.
ರಾಂಪುರ ಕೆರೆಯಲ್ಲಿ ಕಾಲುವೆಯಿಂದ ಸಂಗ್ರಹಿಸಿದ ನೀರು ಮೇಲ್ನೋಟಕ್ಕೆ ಶುಭ್ರವಾಗಿದೆ. ಆದರೆ, ಮನೆಮನೆಗೆ ತಲುಪುವಾಗ ಮಣ್ಣುಮಿಶ್ರಿತವಾಗುತ್ತಿದೆ. ನೀರಿನ ಕೊಳವೆಗಳಲ್ಲಿನ ಸೋರಿಕೆಗಳನ್ನು ಪಾಲಿಕೆ ಅಽಕಾರಿಗಳು ಸರಿಪಡಿಸುವ ಕಾರ್ಯಕ್ಕೆ ಮುಂದಾಗಿಲ್ಲ. ರಾಂಪುರ ಕೆರೆ ಪಕ್ಕದಲ್ಲಿ ನೀರು ಶುದ್ದೀಕರಣ ಮಾಡುವುದಕ್ಕೆ ಹಳೇ ಘಟಕ ಹಾಗೂ ಹೊಸ ಘಟಕ ಇವೆ. ಈ ಪೈಕಿ ಒಂದು ಘಟಕ ಕಾರ್ಯಸ್ಥಗಿತಗೊಳಿಸಿ ವರ್ಷಗಳು ಉರುಳುತ್ತಿವೆ. ಕರ್ನಾಟಕ ನಗರ ನೀರು ಸರಬರಾಜು ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿ¯್ಲÁಡಳಿತ ಈ ಬಗ್ಗೆ ಗಂಭೀರವಾಗಿ ಗಮನ ಹರಿಸುತ್ತಿಲ್ಲ. ಹೊಸ ಘಟಕ ಸ್ಥಾಪನೆಗೆ ಕೋಟ್ಯಾನುಗಟ್ಟಲೇ ಅನುದಾನ ವ್ಯಯಿಸಿದ್ದರೂ ಉದ್ದೇಶ ಈಡೇರೆದ ಜನರು ಪರದಾಟ ಪಡುತ್ತಿದ್ದಾರೆ.
ಹಳದಿ ಮಿಶ್ರೀತ ನೀರು ಸೊರಬರಾಜು
ರಾಯಚೂರು ನಗರದ ಶೇ ೩೦ಕ್ಕಿಂತ ಹೆಚ್ಚು ಭಾಗಕ್ಕೆ ರಾಂಪೂರ ಕೆರೆ ಮೂಲಕ ತುಂಗಭದ್ರಾ ನದಿನೀರು ಶುದ್ದೀಕರಣವಾಗದೆ ಪೂರೈಕೆ ಆಗುತ್ತಿದೆ. ವಾಟರ್ ಬೆಡ್ಡಿಂಗï ಮಾಡುವುದು, ಬ್ಲಿಚಿಂಗ ಪೌಡರï ವೈe್ಞÁನಿಕ ವಿಧಾನದಲ್ಲಿ ಮಿಶ್ರಣ ಮಾಡುವ ಕೆಲಸ ಸರಿಯಾಗಿ ಆಗುತ್ತಿಲ್ಲ. ಈ ಮೊದಲಿದ್ದಂತೆ ಕನಿಷ್ಠ ಪಕ್ಷ ನದಿನೀರನ್ನು ಯಥಾಪ್ರಕಾರ ಮನೆಗಳಿಗೆ ತಲುಪಿಸಿದರೆ ಸಾಕಾಗುತ್ತದೆ.
ಕಳೆದ ಒಂದು ವಾರದಿಂದ ಗಣೇಕಲ್ ಜಲಾಶಯದಿಂದ ಕೆನಾಲ್ ಮೂಲಕ ೧.೫ ಮೀಟರ್ ನೀರು ಬಿಡಲಾಗಿದ್ದು, ಆದರೆ ಬಿಟ್ಟಿರುವ ನೀರು ಮಣ್ಣು ಮಿಶ್ರೀತ ಹಳದಿ ಬಣ್ಣದಿಂದ ಕೂಡಿದೆ. ಇದರಿಂದ ಬಡಾವಣೆಗಳಲ್ಲಿ ನಲ್ಲಿ ನೀರಿನಲ್ಲಿ ಮಣ್ಣಿನ ಕಣಗಳು ಹರಿದು ಬರುತ್ತಿವೆ. ಬಟ್ಟೆಯಿಂದ ಸೋಸಿಕೊಂಡ ರು ನೀರು ಮಾತ್ರ ಹಳದಿ ಬಣ್ಣದಲ್ಲಿ ಇರುತ್ತಿದ್ದು, ಇದರ ಜತೆಗೆ ಕೊಡದಲ್ಲಿ ತುಂಬಿದ ನೀರನ್ನು ಒಂದು ದಿನ ಹಾಗೇ ಇಟ್ಟು, ನೀರಿನೊಳಗಿನ ಮಣ್ಣು ತಳಭಾಗಕ್ಕೆ ಶೇಖರಣೆ ಆದ ಬಳಿಕ ಕುಡಿಯುವುದಕ್ಕೆ ಬಳಕೆ ಮಾಡುತ್ತಿz್ದÁರೆ. ಆದರೆ, ನೀರಿನ ವಾಸನೆ ಹಾಗೇ ಉಳಿದುಕೊಳ್ಳುತ್ತದೆ.
ಕೃಷ್ಣಾ ನದಿಯಿಂದ ಬಿಡುವ ನೀರಿಗೂ ಸಮಸ್ಯೆ
ತುಂಗಾಭದ್ರದ ಜತೆಗೆ ಕೆಲವು ಬಡಾವಣೆಗೆ ಕೃಷ್ಣಾ ನದಿಯಿಂದ ನೀರು ಬಿಡಲಾಗುತ್ತಿದ್ದು, ಆದರೆ ಕಳೆದ ಒಂದು ತಿಂಗಳಿAದ ಒಂದೇ ಮೋಟರ್ ಮೂಲಕ ನೀರು ಸೊರಬರಾಜು ಮಾಡಲಾಗುತ್ತಿದ್ದು, ಆದರೆ ವಿದ್ಯುತ್ ವ್ಯತ್ಯಯ ಹಾಗೂ ತಾಂತ್ರಿಕ ಸಮಸ್ಯೆಯಿಂದ ಇದು ಸಹ ಸೊರಬರಾಜು ಅಗದೆ ನೀಲ್ಲಿಸಿರುವುದರಿಂದ ಜನರಿಗೆ ನೀರಿನ ಹಾಹಾಕಾರ ಎದುರಾಗಿದೆ.
ಮೂರೇ ವಾರ್ಡ್ಗೆ ೨೪ ಗಂಟೆ ನೀರು
ಮಹಾನಗರ ಪಾಲಿಕೆಯ ಒಟ್ಟು ೩೫ ವಾರ್ಡ್ಗಳ ಪೈಕಿ ಕೇವಲ ಮೂರು ವಾರ್ಡ್ಗಳಿಗೆ ಮಾತ್ರ ೨೪/೭ ನೀರು ಪೂರೈಕೆ ಯೋಜನೆ ಜಾರಿಯಾಗಿದೆ. ೨೦೧೯ ರಲ್ಲಿ ಮನೆ,ಮನೆಗೆ ದಿನದ ೨೪ ಗಂಟೆ ಕುಡಿಯುವ ನೀರು ಸೊರಬರಾಜು ಮಾಡಲು ನಗರಸಭೆ( ಇಂದಿನ ಮಹಾನಗರ ಪಾಲಿಕೆ) ಯೋಜನೆ ರೂಪಿಸಿದ್ದರು. ಆದರೆ ಈ ಯೋಜನೆ ಜಾರಿಯಾಗದೆ ಇರುವುದರಿಂದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.