

ಮಲೆನಾಡು, ಕರಾವಳಿ ಭಾಗದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಕಾಲು ಸಂಕ ನಿರ್ಮಿಸುವ ʻಗ್ರಾಮಬಂಧʼ ಯೋಜನೆ ಅನುಷ್ಠಾನ ಮಾಡಲಾಗುವುದು.
ಅನುದಾನದ ಕೊರತೆ ಅನುಭವಿಸುತ್ತಿರುವ ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಕರಾವಳಿ ಅಭಿವೃದ್ಧಿ ಮಂಡಳಿಯಾಗಿ ಪುನಾರಚನೆ ಮಾಡಲು ಬೇಕಾದ ವಿಧೇಯಕ ತರಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ. ಆದರೆ ಪಿಲಿಕುಳ ಪ್ರಾಧಿಕಾರದ ಮಂಡಳಿಯಾಗಿ ಪುನಾರಚನೆ ಘೋಷಣೆ ಆಗಿಲ್ಲ.
ಗಂಜಿಮಠದ 100 ಎಕ್ರೆ ಪ್ರದೇಶದಲ್ಲಿ 66 ಕೋಟಿ ರೂ. ವೆಚ್ಚದಲ್ಲಿ ರಾಜ್ಯ-ಕೇಂದ್ರ ಸಹಭಾಗಿತ್ವದ ಪ್ಲಾಸ್ಟಿಕ್ ಪಾರ್ಕ್ ಈಗಾಗಲೇ ಘೋಷಿತವಾದ ಯೋಜನೆ. ಯಾಂತ್ರೀಕೃತ ದೋಣಿಗಳಿಗೆ 1.5 ಲಕ್ಷ ಕಿ.ಲೀ ಡೀಸೆಲ್ ಮೇಲೆ ಮಾರಾಟ ಕರ ಮರುಪಾವತಿಯ ಬದಲು ಡೀಸೆಲ್ ಡೆಲಿವರಿ ಪಾಯಿಂಟ್‌ನಲ್ಲೇ ವಿನಾಯಿತಿ ಸಹಿತ ಡೀಸೆಲ್ ವಿತರಣೆ ಮೀನುಗಾರರಿಗೆ ಖುಷಿ ತರಬಹುದು.
ಮಂಗಳೂರಿನಲ್ಲಿ ಉದ್ಯಮದ ಅವಕಾಶ ಇರುವ ಸೀವೀಡ್(ಸಮುದ್ರ ಕಳೆ) ಮತ್ತು ಮೀನಿನಿಂದ ಲಭ್ಯವಾಗುವ ಬಯೋ ಆಕ್ಟಿವ್ ವಸ್ತುಗಳನ್ನು ಬಳಸಿಕೊಂಡು ಲಘು ಆಹಾರ ತಯಾರಿಕೆ ಉತ್ತೇಜನ ಕುರಿತು ಕೆಲಸಕ್ಕಾಗಿ ಅತ್ಯಾಧುನಿಕ ಬಯೋಟೆಕ್ ಇನ್ನೋವೇಶನ್ ಕೇಂದ್ರವನ್ನು ಸ್ಥಾಪನೆ, ಮಂಗಳೂರು ಹಾಗೂ ಗೋವಾದ ಪಣಜಿ ಮಧ್ಯೆ ಜಲಮಾರ್ಗ ಅಭಿವೃದ್ಧಿ ಪಡಿಸುವುದು, ಕೇಂದ್ರದ ರಾಷ್ಟ್ರೀಯ ಜಲಮಾರ್ಗ ಪ್ರಾಧಿಕಾರದ ನೆರವಿನಲ್ಲಿ ನೇತ್ರಾವತಿ ನದಿಯೂ ಸೇರಿದಂತೆ ಐದು ನದಿಗಳಲ್ಲಿ ಜಲಮಾರ್ಗ ಅಭಿವೃದ್ಧಿ ಪರಿಸುವುದು ಬಜೆಟ್‌ನಲ್ಲಿ ಪ್ರಕಟಿಸಲ್ಪಟ್ಟ ಇನ್ನಷ್ಟು ಪ್ರಮುಖ ಅಂಶಗಳು.
ಬಹುನಿರೀಕ್ಷಿತ ಕುಮ್ಕಿ ಜಮೀನು, ಕಾನ್, ಬಾಣೆ, ಡೀಮ್ಡ್ ಅರಣ್ಯ ಸಾಗುವಳಿದಾರರ ಹಾಗೂ ಮೂಲಗೇಣಿದಾರರ ಸಮಸ್ಯೆಗಳ ಅಧ್ಯಯನಕ್ಕೆ ಪ್ರತ್ಯೇಕ ಸಮಿತಿ ರಚಿಸಲಾಗುವುದು ಎಂದು ಬಜೆಟ್‌ಭಾಷಣದಲ್ಲಿ ಸಿಎಂ ತಿಳಿಸಿದ್ದಾರೆ.
ವಿಸ್ತರಿಸುತ್ತಲೇ ಹೋಗುತ್ತಿರುವ ಹಳದಿ ಎಲೆ ರೋಗದ ಬಗ್ಗೆ ಈಗಾಗಲೇ ಕರಾವಳಿಯ ಶಾಸಕರು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಪರಿಹಾರಕ್ಕೆ ಕೋರಿರುವುದು ಇಲ್ಲಿ ಉಲ್ಲೇಖನಾರ್ಹ.
ಮಂಗಳೂರು: ಕರಾವಳಿಯ ಅಡಿಕೆ ಬೆಳೆಗಾರರನ್ನು ಕಾಡುತ್ತಿರುವ ಹಳದಿ ಎಲೆ ರೋಗ ಕುರಿತು ವೈಜ್ಞಾನಿಕ ಸಂಶೋಧನೆಗೆ ರಾಜ್ಯ ಸರ್ಕಾರ 25 ಕೋಟಿ ರೂ. ಮೀಸಲಿರಿಸಿದೆ. ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಈ ಅಂಶ ಉಲ್ಲೇಖವಾಗಿದೆ.