ಶರಣರ ತತ್ವಾದರ್ಶ ಅಳವಡಿಸಿಕೊಳ್ಳಲು ಶರಣ ಅಮರೇಶಪ್ಪ ಗಡಿಹಳ್ಳಿ ಸಲಹೆ

20032020 Yelaburga Shivanubhava gosti
Published on

ಯಲಬುರ್ಗಾ: ಪ್ರತಿಯೊಬ್ಬರೂ ಬಸವಾದಿ ಶರಣರ ತತ್ವಾದರ್ಶ ಪಾಲಿಸಬೇಕು ಎಂದು ಸೋಮಸಾಗರದ ಶರಣ ಅಮರೇಶಪ್ಪ ಗಡಿಹಳ್ಳಿ ಹೇಳಿದರು.

ತಾಲೂಕಿನ ತರಲಕಟ್ಟಿ ಗ್ರಾಮದ ವಾಲ್ಮೀಕಿ ಸಮುದಾಯ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬಸವ ಬಂಧುತ್ವ ಶಿವಾನುಭವ ಚಿಂತನಾಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಬದುಕಿನ ಜಂಜಾಟದಿಂದ ದೂವಿರಲು ಪುರಾಣ, ಪ್ರವಚನ ಆಲಿಸಬೇಕು. ಜೀವನದ ಮೌಲ್ಯ ತಿಳಿಸುವ ಶರಣರ ವಚನಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತಾಯಂದಿರು ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಎಲ್ಲರೂ ಸಹೋದರತ್ವದಿಂದ ಬದುಕಲು ಕಲಿಯಬೇಕು ಎಂದರು.

ಕೋಳಿಹಾಳದ ಶರಣ ಬಸವರಾಜ ಇಂಗಳದಾಳ, ಪ್ರಮುಖರಾದ ನಾಗಭೂಷಣ ನವಲಿ, ಕರೆಗೌಡ ಪೋಲೀಸ್‌ಪಾಟೀಲ್, ಫಕೀರಗೌಡ ಮಾಲಿಪಾಟೀಲ್, ಹನಮಗೌಡ ಬಳ್ಳಾರಿ ಮಾತನಾಡಿದರು. ಕುಷ್ಟಗಿಯ ಶರಣೆ ಭಾರತಿ ನೀರಗೇರಿ ಅಧ್ಯಕ್ಷತೆ ವಹಿಸಿದ್ದರು.

ಸಿಂಧನೂರಿನ ಬಸವ ಕೇಂದ್ರದ ಶರಣ ವೀರಭದ್ರಪ್ಪ ಅಣ್ಣನವರು, ಪ್ರಮುಖರಾದ ನಟರಾಜ ಸೋನಾರ, ಮುಕ್ಕಾಲಪ್ಪ ನೆಲಜೇರಿ, ಬಸವರಾಜ ವಲ್ಮಕೊಂಡಿ, ಲೋಕೇಶ್ ನಾಯಕ, ಮುದಿಯಪ್ಪ ಮೇಟಿ, ಹಿರಣ್ಯಾಕ್ಷಗೌಡ ಮಾಲಿಪಾಟೀಲ್, ಪ್ರಕಾಶ ಮಾಲಿಪಾಟೀಲ್, ಸುಭಾಷ್ ಕೋರಿ, ರುದ್ರಪ್ಪ ಹಳ್ಳಿ, ವೀರನಗೌಡ ಪೊಲೀಸ್‌ಪಾಟೀಲ್, ಶರಣಬಸಪ್ಪ ತುರ್ವಿಹಾಳ, ಶ್ರೀಕಾಂತಗೌಡ ಪಾಟೀಲ್, ರಮೇಶ್ ಗೌಡ ಮಾಲಿಪಾಟೀಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net