30 ವರ್ಷಗಳ ಕನಸು ನನಸು

worship the train
ಯಲಬುರ್ಗಾಕ್ಕೆ ಪ್ರಥಮ ಬಾರಿಗೆ ಆಗಮಿಸಿದ ರೈಲಿನ ಮುಂದೆ ಸಾರ್ವಜನಿಕರು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
Published on

ಯಲಬುರ್ಗಾ: ನಮ್ಮ ಭಾಗದ ಜನರು 30 ವರ್ಷಗಳಿಂದ ಕಂಡ ಕನಸು ಇಂದು ನನಸಾಗಿದೆ ಎಂದು ಮುಖಂಡ ಅಂದಾನಗೌಡ ಉಳ್ಳಾಗಡ್ಡಿ ಹೇಳಿದರು.

ಪಟ್ಟಣಕ್ಕೆ ಗುರುವಾರ ಪ್ರಥಮ ಬಾರಿಗೆ ಆಗಮಿಸಿದ ರೈಲಿಗೆ ಪೂಜೆ ಸಲ್ಲಿಸಿ ಮಾತನಾಡಿದರು. ಶಾಸಕ ಬಸವರಾಜ ರಾಯರಡ್ಡಿ ಅವರ ಸತತ ಪರಿಶ್ರಮದಿಂದ ಇಂದು ನಗರಕ್ಕೆ ರೈಲು ಆಗಮಿಸಿದ್ದು, ನಮ್ಮ ಭಾಗದ ಜನತೆ ಸಂತಸಗೊಂಡಿದ್ದಾರೆ.

ರೈಲು ದೂರದ ನಗರಗಳಿಗೆ ಕಡಿಮೆ ಸಮಯ ಹಾಗೂ ಕಡಿಮೆ ಖರ್ಚಿನಲ್ಲಿ ಸಂಚರಿಸಲಿದೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆರಿಬಸಪ್ಪ ನಿಡಗುಂದಿ, ಕಾರ್ಯಾಧ್ಯಕ್ಷ ಆನಂದ ಉಳ್ಳಾಗಡ್ಡಿ, ಪ್ರಮುಖರಾದ ಡಾ.ಶಿವನಗೌಡ ದಾನರಡ್ಡಿ, ಶೇಖರಗೌಡ ಉಳ್ಳಾಗಡ್ಡಿ, ಮಲ್ಲು ಜಕ್ಕಲಿ, ಹಂಪಯ್ಯ ಸ್ವಾಮಿ ಹಿರೇಮಠ, ಶಿವಾನಂದ ಬಣಕಾರ, ಸುರೇಶ ಹಡಪದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net