ತ್ಯಾಜ್ಯ ನೀರು ಚರಂಡಿಗೆ ಹರಿಸಲು ಕ್ರಮವಹಿಸಿ

waste water from the transport unit
ಯಲಬುರ್ಗಾ ಸಾರಿಗೆ ಘಟಕ ವ್ಯವಸ್ಥಾಪಕ ಸಣ್ಣಕುಂಟೆಪ್ಪ ಆಲೂರಗೆ ಪಪಂ ಸದಸ್ಯ ವಸಂತಕುಮಾರ ಭಾವಿಮನಿ ಸೋಮವಾರ ಮನವಿ ಸಲ್ಲಿಸಿದರು. ಪ್ರಮುಖರಾದ ದುರಗಪ್ಪ ತುಮ್ಮರಗುದ್ದಿ, ಅಂದಪ್ಪ ಅಬ್ಬಿಗೇರಿ ಇದ್ದರು.
Published on

ಯಲಬುರ್ಗಾ: ಪಟ್ಟಣದ ಸಾರಿಗೆ ಘಟಕದ ತ್ಯಾಜ್ಯ ನೀರು 14ನೇ ವಾರ್ಡ್‌ನ ಹಲವು ಪ್ರದೇಶದಲ್ಲಿ ಬಂದು ಸೇರುತ್ತಿದ್ದು, ಚರಂಡಿಗೆ ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿ ಪಪಂ ಸದಸ್ಯ ವಸಂತಕುಮಾರ ಭಾವಿಮನಿ ಅವರಿಂದ ಘಟಕ ವ್ಯವಸ್ಥಾಪಕ ಸಣ್ಣಕುಂಟೆಪ್ಪ ಆಲೂರಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ಪಪಂ ಸದಸ್ಯ ವಸಂತಕುಮಾರ ಭಾವಿಮನಿ ಮಾತನಾಡಿ, ಸಾರಿಗೆ ಘಟಕ 14ನೇ ವಾರ್ಡ್‌ನಲ್ಲಿದ್ದು, ಇಲ್ಲಿ ಬಸ್ಸುಗಳನ್ನು ತೊಳೆದ ತ್ಯಾಜ್ಯ ನೀರು ಡಿಪೋ ಹಿಂಭಾಗದ ಗೌಂಡಿ ಸಂಘ, ಸಾರ್ವಜನಿಕರ ಆಸ್ತಿ ಮತ್ತು ಶಾಲಾ ಆವರಣದಲ್ಲಿ ಬಂದು ನಿಲ್ಲಿತ್ತಿದೆ. ಇದರಿಂದ ನಿವಾಸಿಗಳು, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಸೊಳ್ಳೆಗಳ ಉತ್ಪತ್ತಿಯಿಂದ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.

ಹೀಗಾಗಿ ಬಸ್ ಡಿಪೋ ನೀರು ವ್ಯವಸ್ಥಿತವಾಗಿ ಚರಂಡಿಗೆ ಹರಿಯುವಂತೆ ಮಾಡಬೇಕು. ಇಲ್ಲವಾದರೆ ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿಯಾದರೆ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆ ಮಾಡಬೇಕಾಗುತ್ತದೆ ಎಚ್ಚರಿಸಿದರು. ಮುಖಂಡರಾದ ದುರಗಪ್ಪ ತುಮ್ಮರಗುದ್ದಿ, ಅಂದಪ್ಪ ಅಬ್ಬಿಗೇರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net