ಮನೆ ಮುಂದೆಯೇ ತ್ಯಾಜ್ಯ ನೀರು ಸಂಗ್ರಹ

waste water collection in front of the house
ತಾಳಕೇರಿ ಗ್ರಾಮ ಪಂಚಾಯಿತಿಗೆ ಒಳಪಡುವ ಚೌಡಾಪುರದಲ್ಲಿ ಗ್ರಾಮದಲ್ಲಿ ತಾಜ್ಯ ನೀರು ಸಂಗ್ರವಾಗಿರುವುದು.
Published on

ಯಲಬುರ್ಗಾ: ತಾಲೂಕಿನ ಚೌಡಾಪುರ ಗ್ರಾಮದಲ್ಲಿ ತ್ಯಾಜ್ಯ ನೀರು ಸರಾಗವಾಗಿ ಹರಿದು ಹೋಗಲು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ.

ತಾಳಕೇರಿ ಗ್ರಾಮ ಪಂಚಾಯಿತಿಗೆ ಒಳಪಡುವ ಚೌಡಾಪುರದಲ್ಲಿ ಓಣಿಗಳ ತ್ಯಾಜ್ಯ ನೀರು ಹರಿದು ಮುಂದಕ್ಕೆ ಹೋಗಲು ಅವಕಾಶ ಇಲ್ಲದೆ ಒಂದೇ ಕಡೆ ಸಂಗ್ರಹವಾಗುತ್ತಿದೆ. ಇದರಿಂದ ಸೊಳ್ಳೆ ಕಾಟ ಹೆಚ್ಚಾಗಿದ್ದು, ಗ್ರಾಮಸ್ಥರು ಸಾಂಕ್ರಾಮಿಕ ರೋಗಗಳ ಭೀತಿ ಎದುರಿಸುವಂತಾಗಿದೆ.

ಗ್ರಾಮದ ಜಗದೇವಪ್ಪ ಹಡಪದ ಎಂಬುವರ ಮನೆ ಮುಂದೆ ಚರಂಡಿ ನೀರು ಸಂಗ್ರಹಗೊಳ್ಳುತ್ತಿದ್ದು, ಈ ಮನೆಯವರಿಗೆ ನೆಮ್ಮದಿ ಇಲ್ಲದಂತಾಗಿದೆ. ಪಕ್ಕದ ಜಮೀಜು ಮಾಲೀಕರು ಹೊಲಕ್ಕೆ ನೀರು ನುಗ್ಗುತ್ತದೆ ಎಂದು ರಸ್ತೆಗೆ ಮಣ್ಣು ಹಾಕಿರುವ ಹಿನ್ನೆಲೆಯಲ್ಲಿ ನೀರು ಓಣಿಯಲ್ಲಿ ಸಂಗ್ರಹಗೊಂಡು ದುರ್ನಾತಬೀರುತ್ತಿದೆ. ಈ ಸಮಸ್ಯೆ ಐದಾರು ವರ್ಷಗಳಿಂದ ಮುಂದುವರಿದಿದ್ದರೂ ಸ್ಥಳೀಯ ಆಡಳಿತ ಪರಿಹಾರ ಕ್ರಮಕ್ಕೆ ಮುಂದಾಗಿಲ್ಲ.

ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ. ಇನ್ನಾದರೂ ತೊಂದರೆ ಬಗೆಹರಿಸಲು ಸಂಬಂಧಿಸಿದವರು ಮುಂದಾಗಬೇಕು ಎಂದು ಗ್ರಾಮಸ್ಥರಾದ ಚಂದನಗೌಡ ಮಾಲಿಪಾಟೀಲ್, ಮುದಕಣ್ಣ ಜಾಲಿಹಾಳ, ಹನುಮೇಶ ಮ್ಯಾಗೇರಿ, ಹನುಮೇಶ ಕಾಸನಕಂಡಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net