ಕಲಾವಿದರಿಗೆ ಪ್ರೋತ್ಸಾಹ ಅಗತ್ಯ

social drama launch
ನಿಲೋಗಲ್ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಾಮಾಜಿಕ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ಅರವಿಂದಗೌಡ ಪಾಟೀಲ್ ಮಾತನಾಡಿದರು. ಶರಣಪ್ಪ ರ‌್ಯಾವಣಿಕಿ, ಗ್ರಾಮದ ಶಿವನಾಗಯ್ಯ ಹಿರೇಮಠ, ಪ್ರಮುಖರಾದ ಅಯ್ಯನಗೌಡ ಕೆಂಚಮ್ಮನವರ್, ಶರಣಪ್ಪ ಗೌಡ್ರ, ರಾಚಪ್ಪ ಹುರಳಿ ಇತರರಿದ್ದರು.
Published on

ಯಲಬುರ್ಗಾ: ತಾಲೂಕಿನ ನಾನಾ ಗ್ರಾಮಗಳಲ್ಲಿ ರಂಗಭೂಮಿ ಕಲೆಗಳು ಸದ್ದು ಮಾಡುತ್ತಿವೆ. ಯಲಬುರ್ಗಾ ರಂಗಭೂಮಿಗಳ ತವರೂರು ಎಂದೇ ಪ್ರಸಿದ್ಧಿ ಪಡೆದಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅರವಿಂದಗೌಡ ಪಾಟೀಲ್ ಹೇಳಿದರು.

ತಾಲೂಕಿನ ನಿಲೋಗಲ್ ಗ್ರಾಮದಲ್ಲಿ ಶರಣಬಸವೇಶ್ವರ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ಕಲಿಯುಗದಲ್ಲಿ ಖದೀಮರ ಕಾದಾಟ ಅರ್ಥಾತ್ ಶಕ್ತಿಯ ಕ್ರಾಂತಿ ಶಿವನ ಶಾಂತಿ ಸಾಮಾಜಿಕ ನಾಟಕಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು. ಆಧುನಿಕ ಯುಗ ಒತ್ತಡದಿಂದ ಕೂಡಿದೆ. ಗ್ರಾಮೀಣ ಭಾಗದಲ್ಲಿ ಕಲೆಗಳನ್ನು ಜೀವಂತವಾಗಿ ಉಳಿಸುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ ಎಂದರು.

ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಅಯ್ಯನಗೌಡ ಕೆಂಚಮ್ಮನವರ್ ಮಾತನಾಡಿ, ಪ್ರತಿಯೊಬ್ಬರೂ ನಾಟಕದಲ್ಲಿನ ಮಾನವೀಯ ಮೌಲ್ಯ ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದರು. ಶರಣಪ್ಪ ರ‌್ಯಾವಣಿಕಿ, ಗ್ರಾಮದ ಶಿವನಾಗಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು.

ಗ್ರಾಪಂ ಸದಸ್ಯ ಶರಣಪ್ಪ ಗೌಡ್ರ, ಪ್ರಮುಖರಾದ ರಾಚಪ್ಪ ಹುರಳಿ, ಪ್ರಭುಲಿಂಗಪ್ಪ ಪೊಲೀಸ್ ಪಾಟೀಲ್, ಗಾಳೆಪ್ಪ ಓಜನಹಳ್ಳಿ, ಪ್ರಭುರಾಜ ಪಾಟೀಲ್, ಶಿವಣ್ಣ ಸಜ್ಜನ್, ಮಹೇಶ ಮಾಲಿ ಪಾಟೀಲ್, ಮೈಲಾರಪ್ಪ ಕನಕಗಿರಿ, ವೆಂಕಟೇಶ ಎನ್.ಗದ್ದಿ, ನಾಗಪ್ಪ ಕೊಂಡಗುರಿ, ಶರಣಪ್ಪ ಭೂತಲ್, ವಿರುಪಣ್ಣ ಗದ್ದಿ, ಶರಣಪ್ಪ ಪೊಲೀಸ್ ಪಾಟೀಲ್, ಮಹಾಂತೇಶ ಸಾಹುಕಾರ್, ದೇವಪ್ಪ ತೋಳದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net