ನಿರ್ಣಾಯಕರ ನಿರ್ಧಾರವೇ ಕೊನೆ

Yelburga kabaddi turnment
ಗಾಣಧಾಳದಲ್ಲಿ ಶನಿವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ತಾಳಕೇರಿ ಚಾಲನೆ ನೀಡಿದರು. ವಾಲ್ಮೀಕಿ ಸಮಾಜದ ತಾಲೂಕು ಉಪಾಧ್ಯಕ್ಷ ಹನುಮಗೌಡ ಪಾಟೀಲ್, ಗ್ರಾಪಂ ಸದಸ್ಯರಾದ ಓಮಣ್ಣ ಚನ್ನದಾಸರ, ಶ್ರೀನಿವಾಸಗೌಡ ಪೊಲೀಸ್ ಪಾಟೀಲ್, ಪ್ರಮುಖರಾದ ಹನುಮಪ್ಪ ಸಣ್ಣೇಗೌಡ್ರ, ಯಮನೂರಪ್ಪ ಚಿಗರಿ ಇದ್ದರು.
Published on

ಯಲಬುರ್ಗಾ: ಕ್ರೀಡೆ ವ್ಯಕ್ತಿ ಹಾಗೂ ತಂಡದ ಪರ ಇರಬಾರದು. ಕ್ರೀಡಾಕೂಟದಲ್ಲಿ ನಿರ್ಣಾಯಕರ ನಿರ್ಧಾರವೇ ಅಂತಿಮ ಎಂದು ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ತಾಳಕೇರಿ ಹೇಳಿದರು.

ತಾಲೂಕಿನ ಗಾಣಧಾಳ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ದೇವಿ ಪರಮೇಶ್ವರಿ ಜಾತ್ರೆ ಅಂಗವಾಗಿ ಭಗತ್‌ಸಿಂಗ್ ಸ್ಪೋರ್ಟ್ಸ್ ಕ್ಲಬ್‌ನಿಂದ ಶನಿವಾರ ಸಂಜೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ರಾಜ್ಯದ 50ಕ್ಕೂ ಹೆಚ್ಚು ತಂಡಗಳು ಟೂರ್ನಿಯಲ್ಲಿ ಭಾಗವಹಿಸಿವೆ. ಆದರೆ, ಕರ್ನಾಟಕದಲ್ಲಿ ಕಬಡ್ಡಿಗೆ ದೊರೆಯುತ್ತಿರುವ ಪ್ರೋತ್ಸಾಹ ರಾಷ್ಟ್ರ ಮಟ್ಟದಲ್ಲಿ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವಾಲ್ಮೀಕಿ ಸಮಾಜದ ತಾಲೂಕು ಉಪಾಧ್ಯಕ್ಷ ಹನುಮಗೌಡ ಪಾಟೀಲ್, ಗ್ರಾಪಂ ಸದಸ್ಯರಾದ ಓಮಣ್ಣ ಚನ್ನದಾಸರ, ಶ್ರೀನಿವಾಸಗೌಡ ಪೊಲೀಸ್ ಪಾಟೀಲ್, ಪ್ರಮುಖರಾದ ಹನುಮಪ್ಪ ಸಣ್ಣೇಗೌಡ್ರ, ಯಮನೂರಪ್ಪ ಚಿಗರಿ, ದುರುಗಪ್ಪ ಹರಿಜನ, ಹನುಮಪ್ಪ ಎಮ್ಮಿ, ದುರುಗಪ್ಪ ಪ್ಯಾಟಿಹಾಳ, ಯಮನೂರಪ್ಪ ಬಸರಿಹಾಳ ಪಿಡ್ಡನಗೌಡ ಮಾಲಿ ಗೌಡ್ರ, ಅಮರೇಶ ಕರಕಪ್ಪನವರ, ಹನಮೇಶ ನಾಯಕ, ಮರಿಯಪ್ಪ ಹಟ್ಟಿ, ಮಂಜುನಾಥ ಪೊಲೀಸ್ ಪಾಟೀಲ್, ಶಿಕ್ಷಕ ಪರಶುರಾಮ ಲೋಕರೆ, ಶಂಕ್ರಪ್ಪ ಮಾಕಪ್ಪನವರ, ನಾಗರಾಜ, ಎಸ್ಡಿಎಂಸಿ ಮಾಜಿ ಅಧ್ಯಕ್ಷ ಹನುಮಂತಪ್ಪ ಹರಿಜನ, ಉಪನ್ಯಾಸಕ ಯಮನೂರಪ್ಪ ಕಂಬಳಿ, ಎಸ್ಡಿಎಂಸಿ ಅಧ್ಯಕ್ಷ ಯಮನೂರಪ್ಪ ಈಳಿಗೇರ, ಶಿಕ್ಷಕರಾದ ಯಮನೂರಪ್ಪ ಪೊಲೀಸ್ ಪಾಟೀಲ್, ದೇವಪ್ಪ ಪೊಲೀಸ್ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net