ಚಿತ್ರರಂಗಕ್ಕೆ ಉತ್ತರ ಕರ್ನಾಟಕ ಕೊಡುಗೆ ಅಪಾರ

Yelburga new film shooting
ಯಲಬುರ್ಗಾದ ಮೋಗ್ಗಿಬಸವೇಶ್ವರ ದೇವಸ್ಥಾನದಲ್ಲಿ ಆನಂದ ಕಲಕಬಂಡಿ ನಿರ್ದೇಶನದ ಚಂದ್ರಹಾಸ ಚಲನಚಿತ್ರದ ಮುಹೂರ್ತ ಕಾರ್ಯಕ್ರಮ ನಡೆಯಿತು. ಶ್ರೀಧರ ಮುರಡಿ ಹಿರೇಮಠ ಸ್ವಾಮೀಜಿ ಬಸವಲಿಂಗೇಶ್ವರ ಶಿವಾಚಾರ್ಯ, ಪಿಎಸ್‌ಐ ವಿಜಯ ಪ್ರತಾಪ್, ನಿರ್ಮಾಪಕ ಬಸನಗೌಡ ಪಾಟೀಲ, ನಟ ಹರೀಶ ಹಿರಿಯೂರು, ಪ್ರಮುಖರಾದ ಬಸವಲಿಂಗಪ್ಪ ಭೂತೆ, ವೀರಣ್ಣ ಹುಬ್ಬಳ್ಳಿ, ಅಂದಾನಗೌಡ ಉಳ್ಳಾಗಡ್ಡಿ ಇತರರಿದ್ದರು.
Published on

ಯಲಬುರ್ಗಾ: ದೇಶದಲ್ಲಿಯೇ ಕನ್ನಡ ಚಿತ್ರರಂಗಕ್ಕೆ ವಿಶೇಷ ಸ್ಥಾನವಿದ್ದು, ದೇಶ ವಿದೇಶಗಳಲ್ಲಿ ಹೆಸರು ಮಾಡಿದಂತಹ ಮಹಾನ್ ಕಲಾವಿದರು ಸ್ಯಾಂಡಲ್‌ವುಡ್‌ಗೆ ಶ್ರಮಿಸಿದ್ದಾರೆ ಎಂದು ಶ್ರೀಧರ ಮುರಡಿ ಹಿರೇಮಠ ಸ್ವಾಮೀಜಿ ಬಸವಲಿಂಗೇಶ್ವರ ಶಿವಾಚಾರ್ಯರು ಹೇಳಿದರು.

ಪಟ್ಟಣದ ಆನಂದ ಕಲಕಬಂಡಿ ನಿರ್ದೇಶನದ ಅಮರ ಶ್ರೀ ಫಿಲ್ಮಸ್‌ನ ಚಂದ್ರಹಾಸ ಎಂಬ ನೂತನ ಕನ್ನಡ ಚಲನಚಿತ್ರ ಮುಹೂರ್ತಕ್ಕೆ ಮೋಗ್ಗಿಬಸವೇಶ್ವರ ದೇವಸ್ಥಾನದಲ್ಲಿ ಚಾಲನೆ ನೀಡಿ ಸೋಮವಾರ ಮಾತನಾಡಿದರು. ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧ ಕಲಾವಿದರು ಇರುವುದನ್ನು ನೋಡಿದ್ದೇವೆ. ಅಂತವರಿಂದ ಕನ್ನಡ ಚಿತ್ರರಂಗ ಇನ್ನಷ್ಟು ಬೆಳೆಯಲಿ. ಯುವ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶಗಳು ಸಿಗಬೇಕು ಎಂದರು.

ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಪಟ್ಟಣದ ಯುವ ನಿರ್ದೇಶಕ ಆನಂದ ಕಲಕಬಂಡಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಚಂದ್ರಹಾಸ ಸಿನಿಮಾ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು. ಪಿಎಸ್‌ಐ ವಿಜಯ ಪ್ರತಾಪ್, ನಿರ್ಮಾಪಕ ಬಸನಗೌಡ ಪಾಟೀಲ, ನಟ ಹರೀಶ ಹಿರಿಯೂರು, ಪ್ರಮುಖರಾದ ಬಸವಲಿಂಗಪ್ಪ ಭೂತೆ, ವೀರಣ್ಣ ಹುಬ್ಬಳ್ಳಿ, ಅಂದಾನಗೌಡ ಉಳ್ಳಾಗಡ್ಡಿ, ಶರಣಪ್ಪ ಗಾಂಜಿ, ಸುಧೀರ್ ಕೊರ್ಲಳ್ಳಿ, ಡಾ.ಶಿವನಗೌಡ್ರ ದಾನರಡ್ಡಿ, ಕಳಕಪ್ಪ ತಳವಾರ, ಬಸವಲಿಂಗಪ್ಪ ಕೊತ್ತಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net