ಕಾರಲ್ಲಿದ್ದ 3.40 ಲಕ್ಷ ರೂ. ದೋಚಿ ಪರಾರಿ

Rs. 3.40 lakhs. Robbery
ಯಲಬುರ್ಗಾ ಎಸ್‌ಬಿಐ ಬ್ಯಾಂಕ್ ಬಳಿ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು ಹಣ ದೋಚಿರುವುದನ್ನು ಪಿಎಸ್‌ಐ ವಿಜಯ್ ಪ್ರತಾಪ್ ಪರಿಶೀಲಿಸಿದರು. ಹಣ ಕಳೆದುಕೊಂಡ ಬಸವರಾಜ ಲಮಾಣಿ ಇದ್ದಾರೆ.
Published on

ಯಲಬುರ್ಗಾ: ಪಟ್ಟಣದ ಕೊಪ್ಪಳ ರಸ್ತೆಯ ಎಸ್‌ಬಿಐ ಬ್ಯಾಂಕ್ ಬಳಿ ಗುರುವಾರ ಸಂಜೆ 3.40 ಲಕ್ಷ ರೂ. ದರೋಡೆ ಮಾಡಲಾಗಿದೆ.

ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ವಿದ್ಯುತ್ ಗುತ್ತಿಗೆದಾರ ಬಸವರಾಜ ಲಮಾಣಿ ಎಂಬುವರು ತಮ್ಮ ಖಾತೆಯಿಂದ ಹಣ ಬಿಡಿಸಿಕೊಂಡು ಕಾರಿನಲ್ಲಿಟ್ಟು ಬ್ಯಾಂಕ್ ಪಕ್ಕದಲ್ಲಿ ಚಹಾ ಕುಡಿಯಲು ಹೋದಾಗ ಕದೀಮರು ಕಾರ್ ಗ್ಲಾಸ್ ಒಡೆದು ಹಣ ದೋಚಿ ಪರಾರಿಯಾಗಿದ್ದಾರೆ.

ಈ ಕುರಿತು ಯಲಬುರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ವಿಜಯ್ ಪ್ರತಾಪ್ ಸ್ಥಳ ಪರಿಶೀಲನೆ ಮಾಡಿ ತನಿಖೆ ಕೈಗೊಂಡಿದ್ದಾರೆ.

ಐದು ಮೋಟಾರ್ ಕಳವು

ಯಲಬುರ್ಗಾ: ಪಟ್ಟಣದ ಮಲಕಸಮುದ್ರ ಬಳಿಯ ಪಪಂ ಕಸ ವಿಲೇವಾರಿ ಘಟಕದಲ್ಲಿನ ಐದು ಮೋಟಾರ್ ಕಳವು ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಮುಖ್ಯಾಧಿಕಾರಿ ನಾಗೇಶ ನೀಡಿದ ದೂರಿನ ಮೇರೆಗೆ ಅಪರಾಧ ತಡೆ ಪೊಲೀಸರ ತಂಡ ಸ್ಥಳ ಪರಿಶೀಲನೆ ನಡೆಸಿದ್ದು, 2 ಎಚ್‌ಪಿ ಎರಡು ಮೋಟಾರ್, 5 ಎಚ್‌ಪಿ ಒಂದು ಮೋಟಾರ್ ಕಳ್ಳತನವಾಗಿರುವುದು ಕಂಡುಬಂದಿದೆ. ಯಲಬುರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net