ಹಾನಿಗೆ ಪರಿಹಾರ ಒದಗಿಸಿ

RAIN
ಯಲಬುರ್ಗಾ ತಾಲೂಕಿನ ಶಿರಗುಂಪಿ ಗ್ರಾಮದ ಶ್ರೀ ಕರಿಬಸವೇಶ್ವರ ದೇವಸ್ಥಾನ ಆವರಣ ಸಂಪೂರ್ಣ ಜಲಾವೃತ್ತಗೊಂಡಿರುವುದು
Published on

ಯಲಬುರ್ಗಾ: ಪಟ್ಟಣ ಸೇರಿ ತಾಲೂಕಿನ ನಾನಾ ಕಡೆ ಮಂಗಳವಾರ ತಡರಾತ್ರಿ ಸುರಿದ ಮಳೆಗೆ ಹೆಚ್ಚಿನ ಹಾನಿಯಾಗಿದೆ.

ಬಳೂಟಗಿ ಗ್ರಾಮದಲ್ಲಿನ ಮರಿಸ್ವಾಮಿ ಹಾದಿಮನಿ ಎಂಬುವವರ ಮನೆಗೆ ರಸ್ತೆ ನೀರು ನುಗ್ಗಿದೆ. ರಾತ್ರಿಯಿಡಿ ನೀರು ಹೊರ ಚೆಲ್ಲುವ ಕಾರ್ಯ ಮಾಡಿದ್ದಾರೆ.

ಶಿರಗುಂಪಿ ಗ್ರಾಮದ ಹೊರವಲಯದಲ್ಲಿರುವ ಕರಿಬಸವೇಶ್ವರ ದೇವಸ್ಥಾನಕ್ಕೆ ನೀರು ಹೊಕ್ಕಿದೆ ಅಡುಗೆ ಕೊಠಡಿ ಸಂಪೂರ್ಣ ಜಲಾವೃತ್ತಗೊಂಡು ಪ್ರಸಾದ ವ್ಯವಸ್ಥೆಗೆ ಸಂಗ್ರಹಿಸಿದ ದವಸ-ಧಾನ್ಯಗಳು ನೀರು ಪಾಲಾಗಿವೆ, ಒಟ್ಟಾರೆಯಾಗಿ ಸುರಿದ ಮಳೆ ಹಲವಾರು ಅವಘಡಗಳನ್ನು ಸೃಷ್ಠಿ ಮಾಡಿದೆ, ತಾಲೂಕು ಅಧಿಕಾರಿಗಳು ಪರಿಶೀಲಿಸಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net