ಅಂಚೆ ಇಲಾಖೆಯಿಂದ ಜನಪರ ಯೋಜನೆ

MEETING
ಯಲಬುರ್ಗಾ ಅಂಚೆ ಕಚೇರಿಯಲ್ಲಿ ಏರ್ಪಡಿಸಿದ ಜನ ಸ್ಪಂದನಾ ಸಭೆಯನ್ನು ಕೊಪ್ಪಳ ವಿಭಾಗೀಯ ಅಂಚೆ ಇಲಾಖೆ ಅಧೀಕ್ಷಕ ಶಿವಾನಂದ ರಬಕವಿ ಉದ್ಘಾಟಿಸಿ ಮಾತನಾಡಿದರು. ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಮಾಜಿ ಅಧ್ಯಕ್ಷ ಅಂದಾನಗೌಡ ಉಳ್ಳಾಗಡ್ದಿ , ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ, ಪ.ಪಂ.ಮುಖ್ಯಾಧಿಕಾರಿ ನಾಗೇಶ ಮಾತನಾಡಿದರು. ಅಂಚೆ ಪಾಲಕ ವೀರೇಶ, ನಿರೀಕ್ಷಕ ಸಾಗರ ಹಂಚಿನಾಳ ಇತರರಿದ್ದರು.
Published on

ಯಲಬುರ್ಗಾ: ಅಂಚೆ ಇಲಾಖೆ ಮನೆ ಬಾಗಿಲಿಗೆ ಸೇವೆ ನೀಡುವ ಏಕೈಕ ಸಂಸ್ಥೆಯಾಗಿದೆ ಎಂದು ಕೊಪ್ಪಳ ವಿಭಾಗೀಯ ಅಂಚೆ ಇಲಾಖೆ ಅಧೀಕ್ಷಕ ಶಿವಾನಂದ ರಬಕವಿ ಹೇಳಿದರು.

ಪಟ್ಟಣದ ಅಂಚೆ ಕಚೇರಿಯಲ್ಲಿ ಏರ್ಪಡಿಸಿದ ಜನ ಸ್ಪಂದನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಜನರ ವಿಶ್ವಾಸವನ್ನು ಸುಮಾರು 200 ವರುಷಗಳಿಂದ ಇಲಾಖೆ ಉಳಿಸಿಕೊಳ್ಳುವುದರೊಂದಿಗೆ ಪ್ರಾಮಾಣಿಕತೆಗೆ ಹೆಸರಾಗಿದೆ.

ಇಲಾಖೆ ಬೃಹದಾಕಾರವಾಗಿ ಬೆಳೆಯಲು ನಾಡಿನ ಜನತೆ ಪ್ರೀತಿ, ವಿಶ್ವಾಸವೇ ಕಾರಣ. ಅನೇಕ ಜನಪರ ಯೋಜನೆಗಳನ್ನು ಇಲಾಖೆ ಜಾರಿಗೆ ತಂದಿದ್ದು ಅದರ ಸದುಪಯೋಗವನ್ನು ತೆಗೆದುಕೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net