ಕಲೆಯನ್ನು ಶ್ರೀಮಂತಗೊಳಿಸಿದ ಖಾಜಾಸಾಬ್

Yelburga Nudinamana
ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದಲ್ಲಿ ಸೋಮಚಾರ ಆಯೋಜಿಸಿದ್ದ ಕಲಾವಿದ ಖಾಜಾಸಾಬ ಕಲ್ಲೂರ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಇಟಗಿಯ ಡಾ ಗುರುಶಾಂತ ಸ್ವಾಮೀಜಿ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಸಿ.ಎಚ್.ಪೊಲೀಸ್ ಪಾಟೀಲ, ವಕೀಲರಾದ ಎಸ್.ಎನ್.ಶ್ಯಾಗೋಟಿ, ವೀರಣ್ಣ ನಿಂಗೋಜಿ, ವಿರೂಪಾಕ್ಷಪ್ಪ ಉಳ್ಳಾಗಡ್ಡಿ, ವೀರಯ್ಯ ಹಿರೇಮಠ, ಗೌಡಪ್ಪ ಬಲಕುಂದಿ ಇದ್ದರು.
Published on

ಯಲಬುರ್ಗಾ: ಕಲೆಯಿಂದ ಸಾಕಷ್ಟು ಜನರ ಪ್ರೀತಿ ಗಳಿಸಲು ಸಾಧ್ಯ. ಅದಕ್ಕೆ ಕಲಾವಿದ ಖಾಜಾಸಾಬ ಕಲ್ಲೂರ ಅವರು ಉದಾಹರಣೆ ಎಂದು ಇಟಗಿಯ ಡಾ.ಗುರುಶಾಂತ ಸ್ವಾಮೀಜಿ ಹೇಳಿದರು.

ತಾಲೂಕಿನ ಕರಮುಡಿ ಗ್ರಾಮ ಕರವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರೀ ಕರವೀರಭದ್ರೇಶ್ವರ ಟ್ರಸ್ಟ್ ಕಮಿಟಿ ಸೋಮವಾರ ಆಯೋಜಿಸಿದ್ದ ಕಲಾವಿದ ಖಾಜಾಸಾಬ ಕಲ್ಲೂರ ಅವರಿಗೆ ನುಡಿನಮನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಹುಟ್ಟು ಆಕಸ್ಮಿಕವಾದರೂ ಸಾವು ಮಾತ್ರ ನಿಶ್ಚಿತ. ಆದರೆ ಹುಟ್ಟು ಸಾವುಗಳ ಮಧ್ಯೆ ಜೀವನ ಸಾರ್ಥಕಗೊಳಿಸಿ ಎಂದರು.

ಖಾಜಾಸಾಬ ಅವರು ಈ ನಾಡಿನಲ್ಲಿ ಹುಟ್ಟಿ ಕಲೆಯನ್ನು ಶ್ರೀಮಂತಿಕೆಗೊಳಿಸಿದರು. ಅವರ ಅಗಲುವಿಕೆಯಿಂದ ಕುಟುಂಬಕ್ಕೆ ನೋವು ಆಗಿರುವುದು ಸಹಜ. ಸಾಂತ್ವನ ಬಯಸುವುದು ನಮ್ಮ ಧರ್ಮ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸಿದರು. ಜಿಪಂ ಮಾಜಿ ಸದಸ್ಯ ಸಿ.ಎಚ್.ಪೊಲೀಸ್ ಪಾಟೀಲ, ವಕೀಲರಾದ ಎಸ್.ಎನ್.ಶ್ಯಾಗೋಟಿ, ವೀರಣ್ಣ ನಿಂಗೋಜಿ, ವಿರೂಪಾಕ್ಷಪ್ಪ ಉಳ್ಳಾಗಡ್ಡಿ, ವೀರಯ್ಯ ಹಿರೇಮಠ, ಗೌಡಪ್ಪ ಬಲಕುಂದಿ ಮಾತನಾಡಿದರು.

ಕರವೀರಭದ್ರೇಶ್ವರ ಟ್ರಸ್ಟ ಕಮಿಟಿ ಅಧ್ಯಕ್ಷ ಶರಣಪ್ಪಗೌಡ ಪೊಲೀಸ್ ಪಾಟೀಲ, ತಾಪಂ ಮಾಜಿ ಅಧ್ಯಕ್ಷ ಸಂಗಪ್ಪ ಬಂಡಿ, ತಾಪಂ ಮಾಜಿ ಸದಸ್ಯ ನಾಗಪ್ಪ ವಡ್ಡರ, ಪ್ರಮುಖರಾದ ಡಾ.ಕಾಶಯ್ಯ ನಂದಿಕೋಲ, ವೀರಣ್ಣ ವಾಲಿ, ಹುಚ್ಚೀರಪ್ಪ ರಾಂಪೂರ, ಉಮೇಶ ಕುಕನೂರ, ಯಮನೂರಸಾಬ ಕಲ್ಲೂರ, ಶ್ಯಾಮೀದಸಾಬ ಮುಲ್ಲಾ, ವೀರಣ್ಣ ಪತ್ತಾರ, ಮರ್ಧಾನಸಾಬ ಮುಲ್ಲಾ, ವೀರಣ್ಣ ಪಟ್ಟೇದ, ಮಂಜುನಾಥ ಕುಕನೂರು ಇತರರಿದ್ದರು. ಮಂಜುನಾಥ ಕರೇಗೌಡರ ಹಾಗೂ ಕರವೀರಭದ್ರೇಶ್ವರ ಭಜನಾ ಮಂಡಳಿ ಪ್ರಾರ್ಥನೆ ಭಜನೆ ಹಾಗೂ ಮಂಗಳಾರಾತಿಯನ್ನು ಹಾಡಿದರು.

ಎಡೆ ಸ್ವೀಕರಿಸಿದ ಶ್ವಾನ

ಶ್ರೀ ಹುಚ್ಚೀರೇಶ್ವರ ನಾಟಕದಲ್ಲಿ ಹುಚ್ಚೀರಪ್ಪಜ್ಜನ ಪಾತ್ರಧಾರಿ ಖಾಜಾಸಾಬನ ಜತೆ ಶ್ವಾನ ಸಹ ಭೋಜನ ಮಾಡಿತ್ತು. ಅದೇ ನಾಯಿ ನುಡಿನಮನ ಮಾಡುವಾಗ ಖಾಜಾಸಾಬನಿಗೆ ಮಾಡಿದ ಎಡೆಯನ್ನು ಸ್ವೀಕರಿಸಿತು. ವ್ಯಕ್ತಿ ಮೇಲಿಟ್ಟಿರುವ ಪ್ರೀತಿಯನ್ನು ಮತ್ತೊಮ್ಮೆ ಸಾಬೀತು ಪಡಿಸಿತು. ಕೆಲ ದಿನಗಳ ಹಿಂದೆ ಖಾಜಾಸಾಬ ಅವರ ಅಂತ್ಯಕ್ರಿಯೆ ಆಗುವವರಿಗೂ ಶ್ವಾನ ಹೋಗಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net