ಹೋರಾಟ-ತ್ಯಾಗ ನೆನಪಿಸುವ ವಿಶೇಷ ದಿನ

Independence Day
ಯಲಬುರ್ಗಾ ತಾಲೂಕಿನ ಕುದ್ರಿಕೊಟಗಿ ಅಂಗನವಾಡಿಯಲ್ಲಿ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರ ವೇಷದಲ್ಲಿ ಗಮನ ಸೆಳೆದರು. ಅಂಗನವಾಡಿ ಕಾರ್ಯಕರ್ತೆಯರಾದ ಹನುಮಕ್ಕ ಗೌಡರ, ಸುಜಾತಾ ಛಲವಾದಿ, ಸಹಾಯಕಿ ರತ್ನಾ ಇತರರಿದ್ದರು.
Published on

ಯಲಬುರ್ಗಾ: ಜಾತಿ ವ್ಯವಸ್ಥೆ ತೊಲಗಬೇಕು. ಪರಿಶಿಷ್ಟರು ಸಮಾಜದಲ್ಲಿ ಎಲ್ಲರಂತಿರಲು ಮಿಸಲಾತಿ ಮುಂದುವರಿಯಬೇಕು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ಪಟ್ಟಣದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಶುಕ್ರವಾರ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಪಂಚದ ವಿವಿಧ ಭಾಗಗಳಲ್ಲಿರುವ ಭಾರತೀಯರು ಉತ್ಸಾಹದಿಂದ ಸ್ವಾತಂತ್ರೊೃೀತ್ಸವ ಆಚರಿಸುತ್ತಾರೆ. ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಿಗೊಳ್ಳಲು ದೀರ್ಘ ಹೋರಾಟ ಮತ್ತು ತ್ಯಾಗಗಳನ್ನು ನೆನಪಿಸುವ ವಿಶೇಷ ದಿನವಾಗಿದೆ. 1857ರಲ್ಲಿ ಭಾರತದಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭವಾಯಿತು.

ನಂತರ ಮಹಾತ್ಮ ಗಾಂಧಿ 1920ರಲ್ಲಿ ಜನರಲ್ಲಿ ಜಾಗೃತಿ ಮೂಡಿಸಿ ಸ್ವಾತಂತ್ರ್ಯ ಚಳವಳಿ ಮುನ್ನಡೆಸಿದರು. 1947 ಜು.4ರಂದು ಬ್ರಿಟಿಷ್ ಸಂಸತ್ತಿನಲ್ಲಿ ಭಾರತೀಯ ಸ್ವಾತಂತ್ರ್ಯದ ಮಸೂದೆ ಅಂಗೀಕರಿಸಲಾಯಿತು. ಆ.15ರಂದು ಭಾರತ ಅಧಿಕೃತವಾಗಿ ಸ್ವತಂತ್ರ ರಾಷ್ಟ್ರವಾಗಿವಾಯಿತು ಎಂದರು. ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಧ್ವಜಾರೋಹಣ ನೇರವೇರಿಸಿದರು.

ತಾಪಂ ಇಒ ಸಂತೋಷ ಪಾಟೀಲ ಬಿರಾದಾರ, ಸಿಡಿಪಿಒ ಬೇಟದೇಶ ಮಾಳೇಕೊಪ್ಪ, ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಮುಖ್ಯಾಧಿಕಾರಿ ನಾಗೇಶ, ಸದಸ್ಯರಾದ ಅಮರೇಶ ಹುಬ್ಬಳ್ಳಿ, ಕಳಕಪ್ಪ ತಳವಾರ, ರೇವಣೇಪ್ಪ ಹಿರೇಕುರುಬರ, ಹನುಮಂತಪ್ಪ ಭಜಂತ್ರಿ, ಡಾ.ನಂದಿತಾ ದಾನರಡ್ಡಿ, ಪ್ರಮುಖರಾದ ಕೆರಿಬಸಪ್ಪ ನಿಡಗುಂದಿ, ಹನುಮಂತಗೌಡ ಚಂಡೂರ, ಸಂಗಣ್ಣ ಟೆಂಗಿನಕಾಯಿ, ಮಹೇಶ ಹಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net