ಮದ್ಯ ಅಕ್ರಮ ಮಾರಾಟ ತಡೆಗಟ್ಟಿ, ಪಿಎಸ್‌ಐ ಪ್ರಶಾಂತ್‌ಗೆ ವಟಪರವಿ ಗ್ರಾಮಸ್ಥರ ಮನವಿ

illegal sale of alcohol
ಯಲಬುರ್ಗಾ ಸಮೀಪದ ವಟಪರವಿ ಗ್ರಾಮದಲ್ಲಿ ಮದ್ಯ ಅಕ್ರಮ ಮಾರಾಟ ತಡೆಯುವಂತೆ ಒತ್ತಾಯಿಸಿ ಬೇವೂರು ಪೊಲೀಸ್ ಠಾಣೆ ಪಿಎಸ್‌ಐ ಪ್ರಶಾಂತ್‌ಗೆ ಗ್ರಾಮಸ್ಥರು ಶುಕ್ರವಾರ ಮನವಿ ಸಲ್ಲಿಸಿದರು. ಪ್ರಮುಖರಾದ ಮಂಜುನಾಥ ನಕ್ಲರ್, ದುರಗಪ್ಪ ನೂತನಗಂಟಿ, ದುರಗಪ್ಪ ಅಮಲಚೆಟ್ಟಿ, ಶೇಖರಪ್ಪ ಕೊಳಜಿ, ಶರಣಪ್ಪ ಟಣಕನಕಲ್, ಹನುಮಂತಪ್ಪ ಬಡಿಗೇರ್ ಇತರರಿದ್ದರು.
Published on

ಯಲಬುರ್ಗಾ: ಸಮೀಪದ ವಟಪರವಿ ಗ್ರಾಮಸ್ಥರು ಮದ್ಯ ಅಕ್ರಮ ಮಾರಾಟ ತಡೆಯುವಂತೆ ಒತ್ತಾಯಿಸಿ ಬೇವೂರು ಪೊಲೀಸ್ ಠಾಣೆ ಪಿಎಸ್‌ಐ ಪ್ರಶಾಂತ್‌ಗೆ ಶುಕ್ರವಾರ ಮನವಿ ಸಲ್ಲಿಸಿದರು.

ಗ್ರಾಮದಲ್ಲಿ ಆರೇಳು ಕಡೆ ಮದ್ಯ ಅಕ್ರಮ ಮಾರಾಟ ನಿರಂತರ ನಡೆಯುತ್ತಿದೆ. ಕಿರಾಣಿ ಅಂಗಡಿ, ಶೆಡ್‌ಗಳಲ್ಲಿ ಮಾರಾಟ ಅಧಿಕವಾಗಿದೆ. ಇದರಿಂದ ಜನಸಾಮಾನ್ಯರು ಹಾಗೂ ಕುಡುಕರ ಕುಟುಂಬದ ಮಹಿಳೆಯರಿಗೆ ನೆಮ್ಮದಿ ಇಲ್ಲದಂತಾಗಿದೆ. ಯುವಕರು ಸಹ ಕುಡಿತದ ದಾಸರಾಗಿದ್ದು, ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಅಶಾಂತಿ ವಾತಾವರಣ ಇದ್ದು, ಜಗಳ, ಗಲಾಟೆ ನಡೆಯುತ್ತಿವೆ. ಹಿರಿಯರಿಗೆ ಗೌರವ ಇಲ್ಲದಂತಾಗಿದೆ. ಕಾರಣ ಗ್ರಾಮದಲ್ಲಿ ಸಂಪೂರ್ಣ ಮದ್ಯ ಅಕ್ರಮ ಮಾರಾಟ ತಡೆಯಬೇಕು. ಪರವಾಗಿ ಇಲ್ಲದೆ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಪ್ರಮುಖರಾದ ಮಂಜುನಾಥ ನಕ್ಲರ್, ದುರಗಪ್ಪ ನೂತನಗಂಟಿ, ದುರಗಪ್ಪ ಅಮಲಚೆಟ್ಟಿ, ಶೇಖರಪ್ಪ ಕೊಳಜಿ, ಶರಣಪ್ಪ ಟಣಕನಕಲ್, ಹನುಮಂತಪ್ಪ ಬಡಿಗೇರ್, ಭೀಮಪ್ಪ ಬುಡಶೆಟ್ನಾಳ, ವೆಂಟಕೇಶ ಗಾದಿ, ಮುರ್ತುಜಾಸಾಬ್ ನವಲಕ, ಬಸನಗೌಡ ಪಾಟೀಲ್, ಪ್ರಭುರಾಜ ಕಡೆಮನಿ, ಹುಸೇನ್‌ಸಾಬ್ ತಕ್ಕಲಕೋಟೆ, ಮರಿಸ್ವಾಮಿ ಹರಿಜನ, ಶರಣಪ್ಪ ಹರಿಜನ, ವೆಂಕಟೇಶ ಲಮಾಣಿ, ಮೌನೇಶ ಲಮಾಣಿ, ರಾಮನಗೌಡ ಗೌಡರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net