ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

Untitled design
Published on

ಯಲಬುರ್ಗಾ: ಶರಣ ಚಿಂತನೆಗಳನ್ನು ಮನನ ಮಾಡಿಕೊಳ್ಳುವುದು ಅತ್ಯಗತ್ಯ ಎಂದು ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಶಂಕ್ರಪ್ಪ ಗಾಂಜಿ ಹೇಳಿದರು.

ಪಟ್ಟಣದ ಖಾಸಗಿ ಸಭಾಂಗಣದಲ್ಲಿ ಶುಕ್ರವಾರ ಬಸವ ಶಿವಯೋಗ ಸಮಿತಿ ಆಯೋಜಿಸಿದ್ದ ಶರಣರಾದ ನಿಜಸುಖಿ ಹಡಪದ ಅಪ್ಪಣ್ಣ, ಶಂಕರ ದಾಸಿಮಯ್ಯ, ಅಕ್ಕನಾಗಮ್ಮ ಶರಣೋತ್ಸವ ಹಾಗೂ ವಚನ ಪಿತಾಮಹ ಫ.ಗು.ಹಳಕಟ್ಟಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶರಣರು ವಚನಗಳನ್ನು ಅಳವಡಿಸಿಕೊಂಡು ಬದುಕನ್ನು ರೂಪಿಸಿಕೊಂಡರು. ಅವರ ಆಶಯಗಳನ್ನು ಈಡೇರಿಸಬೇಕಾಗಿದೆ. ಮೌಢ್ಯತೆ ಹಾಗೂ ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಲು 12ನೇ ಶತಮಾನದ ಶಿವಶರಣರು ಶ್ರಮಿಸಿದರು ಎಂದರು.

ಪ್ರಮುಖರಾದ ಶಿವಪ್ಪ ಶಾಸ್ತ್ರೀ ಹಡಪದ, ಸಿದ್ಧಲಿಂಗಪ್ಪ ಶ್ಯಾಗೋಟಿ, ವಿರೂಪಾಕ್ಷಪ್ಪ ಹಡಪದ, ಪರುಶರಾಮ, ಅಶೋಕ ಪಾಟೀಲ, ರುದ್ರಗೌಡ ಗೋಣಿ, ವೀರೇಶ, ದೇವಪ್ಪ ವಾಲ್ಮೀಕಿ, ಅನ್ನಪೂರ್ಣ ಟೆಂಗಿನಕಾಯಿ, ಶರಣಪ್ಪ ಹವಳದ, ಮಲ್ಲಣ್ಣ ಟೆಂಗಿನಕಾಯಿ, ಹನುಮಂತಪ್ಪ ದಾನಕೈ, ವೀರೇಶ ಟೆಂಗಿನಕಾಯಿ, ಬಸವರಾಜ ಹಳ್ಳಿ, ಫಕೀರಪ್ಪ ಗಾಣಗೇರ, ಸಿದ್ದಯ್ಯ ಕೊಣ್ಣೂರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net