

ಯಲಬುರ್ಗಾ: 12ನೇ ಶತಮಾನದ ವಚನ ಚಳವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರಾಗಿ, ಬಸವಣ್ಣನ ಬಲಗೈ ಭಂಟನೆಂದೇ ಹೆಸರು ಪಡೆದಿದ್ದ ಹಡಪದ ಅಪ್ಪಣ್ಣ ಅವರ ಜಯಂತಿಯನ್ನು ಜು.10 ರಂದು ಎಲ್ಲ ಇಲಾಖೆಯವರು ಕಡ್ಡಾಯವಾಗಿ ಆಚರಿಸಬೇಕು ಎಂದು ಗ್ರೇಡ್-2 ತಹಸೀಲ್ದಾರ್ ವಿರುಪಣ್ಣ ಹೊರಪೇಟಿ ಸೂಚಿಸಿದರು.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಹಡಪದ ಅಪ್ಪಣ್ಣ ಜಯಂತ್ಯುತ್ಸವ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಬಸವಣ್ಣನವರ ಬಾಲ್ಯದ ಒಡನಾಡಿಗಳಾಗಿದ್ದ ಅವರು ವಿಶ್ವದ ಪ್ರಥಮ ಸಂಸತ್ತು ಎಂದೇ ಹೆಸರಾದ ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಯಾಗಿ, ಬಸವಣ್ಣನವರಿಗೆ ಯಾವುದೇ ರೀತಿಯ ಮುಜುಗರ ಆಗದಂತೆ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಅವರದ್ದು. ಇಂಥ ಮಹನೀಯರ ಜಯಂತಿಯನ್ನು ಸರ್ಕಾರದ ಆದೇಶದಂತೆ ಎಲ್ಲ ಇಲಾಖೆಯಲ್ಲೂ ಆಚರಿಸಬೇಕು ಎಂದರು.