ಯಲಬುರ್ಗಾ: ರಾಮಾಯಣದಲ್ಲಿ ಮಾನವೀಯತೆ ಹಾಗೂ ಸಾಮಾಜಿಕ ಮೌಲ್ಯ ಕಾಣಬಹುದಾಗಿದೆ ಎಂದು ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಘಟನಾ ಸಂಚಾಲಕ ಪುಟ್ಟರಾಜ ಪೂಜಾರ ಹೇಳಿದರು.
ತಾಲೂಕಿನ ಗುತ್ತೂರು ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ವಾಲ್ಮೀಕಿ ನೀಡಿದ ಸಂದೇಶ ಮನುಕುಲಕ್ಕೆ ದಾರಿದೀಪವಾಗಿದೆ.
ಪ್ರತಿಯೊಬ್ಬರೂ ಜೀವನದಲ್ಲಿ ಎದುರಿಸುವ ಸಂಗತಿ ರಾಮಾಯಣದಲ್ಲಿ ಅಡಕವಾಗಿವೆ. ಜೀವನಮೌಲ್ಯ ಹಾಗೂ ಸಂದೇಶವನ್ನು ಮಹಾಕಾವ್ಯದ ಮೂಲಕ ಸಮಾಜಕ್ಕೆ ನೀಡಿದ್ದಾರೆ. ಆದಿಕವಿ ಮಹರ್ಷಿ ವಾಲ್ಮೀಕಿ ವಿಚಾರ ಪಾಲಿಸೋಣ ಎಂದರು.
ಮುಖಂಡ ಶಿವಪ್ಪ ದ್ಯಾಂಪುರು ಮಾತನಾಡಿದರು. ಮಹರ್ಷಿ ವಾಲ್ಮೀಕಿ ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಲಾಯಿತು. ಇದಕ್ಕೂ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.
ಪ್ರಮುಖರಾದ ನೂರಂದಪ್ಪ ದಾಸಪ್ಪನವರ, ಹನುಮಂತಪ್ಪ ಚಾಪಿ, ಶಶಿಧರ ಗಡಾದ, ಶರಣಪ್ಪ ದಿವಾಣದಾರ, ಮೂರ್ತೆಪ್ಪ ಮೂಲಿಮನಿ, ದುರ್ಗಮ್ಮ ಗಟ್ಟೆಪ್ಪನವರ, ಚನ್ನಮ್ಮ ತಳಬಾಳ, ವಾಸಪ್ಪ ಗಾಣಧಾಳ, ಮಾರುತೆಪ್ಪ ಮಾಲಿಪಾಟೀಲ್, ಶಿವಪ್ಪ ಎಮ್ಮೆರ, ಹನುಮಂತಪ್ಪ ಕೊಪ್ಪಳ, ಶರಣಪ್ಪ ಪೂಜಾರ ಇತರರಿದ್ದರು.