

ಯಲಬುರ್ಗಾ: ದೇವರ ಜಾತ್ರೆಗಳೆಂದರೆ ಅವು ಗ್ರಾಮಗಳ ಪರಂಪರೆ. ಸಾರ್ವಜನಿಕ ಉದ್ದೇಶಕ್ಕಾಗಿ ಒಂದುಗೂಡುವಿಕೆ ಹಾಗೂ ಜನರಲ್ಲಿರುವ ದೈವಭಕ್ತಿ ಅಭಿವ್ಯಕ್ತಿಗೆ ಜಾತ್ರೆ ಎನ್ನಲಾಗುತ್ತದೆ ಎಂದು ಹಿರಿಯ ಮುಖಂಡ ಅಂದಾನಗೌಡ್ರ ಉಳ್ಳಾಗಡ್ಡಿ ಹೇಳಿದರು.
ದ್ಯಾಮಾಂಬಿಕಾ ದೇವಿ ಜಾತ್ರಾ ಮಹೋತ್ಸವದ ಮೊದಲನೇ ದಿನದ ದೇವಿಯ ಭವ್ಯ ಮೂರ್ತಿ ಮೆರವಣಿಗೆಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ಮೂರು ವರ್ಷಗಳಿಗೊಮ್ಮೆ ಆಯೋಜಿಸುವ ಈ ಜಾತ್ರೆಯನ್ನು ಧಾರ್ಮಿಕ ಪರಂಪರೆಯಂತೆ ಪೂಜೆ-ಉತ್ಸವಗಳೊಂದಿಗೆ ವಿಜೃಂಭಣೆಯಿಂದ ನಡೆಸಲಾಗುತ್ತದೆ ಎಂದರು.
ಪಟ್ಟಣದ ಹಿರಿಯರಾದ ಅಮರಪ್ಪ ಕಲಬುರ್ಗಿ, ಅಮರೇಶ ಹುಬ್ಬಳ್ಳಿ, ಅಶೋಕ ಅರಕೇರಿ, ಶಿವಕುಮಾರ ಭೂತೆ, ಶರಣಬಸಪ್ಪ ದಾನಕೈ, ರೇವಣೆಪ್ಪ ಹಿರೇಕುರುಬರ, ಮಹಾಂತೇಶ ಛಲವಾದಿ ಸೇರಿ ಅನೇಕ ಅರ್ಚಕರು ಹಾಜರಿದ್ದರು.